ಬಳ್ಳಾರಿ: ನಗರದಲ್ಲಿ ಹನುಮ ಮಾಲೆ ಸಮಿತಿಯಿಂದ ಮಂಗಳವಾರ ಸಂಜೆ ಬೈಕ್ ರ್ಯಾಲಿ ನಡೆಯಿತು.

ನಗರದ ಕೂಲ್ ಕಾರ್ನರ್ ವೃತ್ತದಿಂದ ನೂರಾರು ಬೈಕ್ಗಳಲ್ಲಿ ಹನುಮ ಭಕ್ತರು ನಗರ ಪ್ರದಕ್ಷಣೆ ಮಾಡಿದರು. ರ್ಯಾಲಿಯಲ್ಲಿ ರಾಮ ಮತ್ತು ಹನುಮಂತನ ಘೋಷಣೆಗಳನ್ನು ಕೂಗಲಾಯಿತು. ರಾಮನಾಮ ಸ್ಮರಣೆ ಮಾಡಲಾಯಿತು.

ಶ್ರಾವಣ ಮಾಸದಲ್ಲಿ ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದ ಮೂರೂರು ಆಂಜನೇಯ ಸ್ವಾಮಿಯ ಹೆಸರಲ್ಲಿ 10 ವರ್ಷಗಳಿಂದಲೂ ಹನುಮ ಮಾಲೆ ಧಾರಣೆ ನಡೆಯುತ್ತಿದೆ. ಮಂಗಳವಾರ ನಡೆದ ಬೈಕ್ ರ್ಯಾಲಿಯಲ್ಲಿ ಹನುಮ ಮಾಲಾಧಾರಿಗಳಷ್ಟೇ ಅಲ್ಲದೆ, ಹಿಂದೂ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು.

ಬಿಜೆಪಿ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ ಮಾತನಾಡಿ, ‘ಹನುಮ ಮಾಲಾಧಾರಣೆ 10 ವರ್ಷಗಳಿಂದ ನಡೆಯುತ್ತಿದೆ. ಇಲ್ಲಿ ನಡೆಯುವ ಬೈಕ್ ರ್ಯಾಲಿಗೆ ಹನುಮನ ಆಶೀರ್ವಾದವಿದೆ. ಹಿಂದೂ ಧರ್ಮದ ಜಾಗೃತಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಬಿಜೆಪಿ ಮುಖಂಡ ಮಹಿಪಾಲ್ ಸೇರಿದಂತೆ ಹಲವರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.