ಹರಪನಹಳ್ಳಿ: ತಾಲ್ಲೂಕಿನ ಅಣಜಿಗೆರೆ ಮತ್ತು ತುಂಬಿಗೆರೆ ಗ್ರಾಮದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಮಂಗಳವಾರ ಹಳ್ಳಕ್ಕೆ ಮಗುಚಿದ ಪರಿಣಾಮ, 4 ಜನ ಗಂಭೀರ ಗಾಯಗೊಂಡಿದ್ದು, 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಕೆಎ 06, ಎಎ 8070 ಸಂಖ್ಯೆ ಬನಶಂಕರಿ (ಮಿರ್ಜಾ) ಬಸ್ ಹಳ್ಳಕ್ಕೆ ಬಿದ್ದಿರುವುದು. ಹೊಸಕೋಟೆ ಗ್ರಾಮದ ಅಜ್ಜ, ಅಜ್ಜಿ ಹಾಗೂ ಮತ್ತಿಬ್ಬರು ಪ್ರಯಾಣಿಕರು ಗಾಯಗೊಂಡಿದ್ದು, ಅಂಬುಲೆನ್ಸ್ ಮೂಲಕ ದಾವಣಗೆರೆ ಕಳಿಸಿಕೊಡಲಾಗಿದೆ. ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ರಸ್ತೆ ಮೇಲೆ ನೀರು ಹರಿಯುತ್ತಿದೆ. ಕಿರಿದಾದ ಸೇತುವೆ ಮೇಲೆ ಬಸ್ ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ. ಪ್ರಯಾಣಿಸುತ್ತಿದ್ದ ಜನರು ಚೀರಾಡುತ್ತಾ, ಬಸ್ ಕಿಟಕಿಗಳ ಮೂಲಕ ಹೊರಗಡೆ ಬಂದಿದ್ದಾರೆ. ಅಷ್ಟರಲ್ಲೆ ಅಕ್ಕಪಕ್ಕದ ಹಳ್ಳಿಯ ಜನ ದೌಡಾಯಿಸಿ, ರಕ್ಷಿಸಿದ್ದಾರೆ.

ಅಜ್ಜನ ಕಾಲು ಸೀಟೊಳಗೆ ಸಿಕ್ಕಿ ಹಾಕಿಕೊಂಡಿದ್ದು, ಉಳಿದ ಪ್ರಯಾಣಿಕರು ಅವರನ್ನು ಹೊರಗೆ ಎಳೆದು, ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅರಸೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.