ಬೀದರ್: ಹೋಳಿ ಹಬ್ಬದ ಅಂಗವಾಗಿ ಬೀದರ್ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ ಹೊರಡಿಸಿದ್ದಾರೆ.

ಸೋಮವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಮಂಗಳವಾರ (ಮಾರ್ಚ್ 3) ಮಧ್ಯರಾತ್ರಿ ತನಕ ಬೀದರ್ ನಗರದಲ್ಲಿ, ಮಾರ್ಚ್ 3ರ ಸಂಜೆ6ರಿಂದ ಮಧ್ಯರಾತ್ರಿ ತನಕ ಬೀದರ್, ಹುಮನಾಬಾದ್, ಬಸವಕಲ್ಯಾಣ, ಔರಾದ್ (ಬಿ), ಕಮಲನಗರ, ಹುಲಸೂರ, ಚಿಟಗುಪ್ಪ ತಾಲ್ಲೂಕಿನಾದ್ಯಂತ ಹಾಗೂ ಮಾರ್ಚ್ 4ರ ಬೆಳಿಗ್ಗೆ 6ರಿಂದ ಮಾರ್ಚ್ 5ರ ವರೆಗೆ ಮಧ್ಯರಾತ್ರಿ 12ರ ವರೆಗೆ ಭಾಲ್ಕಿ ತಾಲ್ಲೂಕಿನಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದ್ದು, ಮಾಲೀಕರು ಮದ್ಯದಂಗಡಿಗಳನ್ನು ಮುಚ್ಚಿಸಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.