ವಿದ್ಯುತ್ ಬಳಸುವ ಯಾವುದೇ ನಿಯಮಗಳ ಉಲ್ಲಂಘನೆಯಿಂದ ಆಗುವ ಅನಾಹುತಗಳಿಗೆ ಗಣೇಶ ಪ್ರತಿಮೆ ಕೂಡಿಸುವ ಸಂಘಟನೆಯ ಮುಖ್ಯಸ್ಥರನ್ನೇ ನೇರ ಹೊಣೆಗಾರರಾಗುತ್ತಾರೆ. ಜೆಸ್ಕಾಂ ಕಂಪನಿಯ ನಿಯಮಾನುಸಾರ ಅನುಮೋದನೆ ಪಡೆದು, ಅಧಿಕೃತ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬೇಕು ಎಂದು ಇಲ್ಲಿನ ಜೆಸ್ಕಾಂ ಎಇಇ ಜಿ.ಎನ್.ಮಲ್ಲಿಕಾರ್ಜುನಗೌಡ ತಿಳಿಸಿದ್ದಾರೆ.