ಬಳ್ಳಾರಿ: ಇರಾನ್- ಇಸ್ರೇಲ್ ನಡುವೆ ಯುದ್ಧ ಹಿನ್ನೆಲೆ ವಿಮಾನ ಸೇವೆಗಳು ರದ್ದಾದ ಕಾರಣ ದುಬೈ ಪ್ರವಾಸಕ್ಕೆ ತೆರಳಿದ ಜಿಲ್ಲೆಯ 50 ಜನ ಆತಂಕಕ್ಕೆ ಸಿಲುಕಿದ್ದಾರೆ.

ದುಬೈ ಪ್ರವಾಸಕ್ಕೆಂದು ಫೆ.24ರಂದು ಬಳ್ಳಾರಿಯಿಂದ ತೆರಳಿದ್ದರು. ಫೆ.28ಕ್ಕೆ ವಾಪಸ್ ಆಗಬೇಕಿತ್ತು.

ಇದರ ನಡುವೆ ಯುದ್ಧದ ಕಾರ್ಮೋಡ ಸೃಷ್ಟಿಯಾದ ಹಿನ್ನೆಲೆ ವಿಮಾನ ಸೇವೆಗಳು ರದ್ದಾದ ಕಾರಣ ಭಾರತಕ್ಕೆ ಬರಲು ಆಗದೆ ಸಿಲುಕಿಕೊಂಡಿದ್ದಾರೆ. ಜಿಲ್ಲೆಯಿಂದ ಪ್ರವಾಸಕ್ಕೆ ತೆರಳಿದ ಮಹಿಳೆಯರು 23, ಪುರುಷರು 27 ಜನ ಸುರಕ್ಷಿತವಾಗಿದ್ದು, ಭಾರತಕ್ಕೆ ಕರೆತರುವಂತೆ ಮನವಿ ಮಾಡಿದ್ದಾರೆ.

ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಈ ಕುರಿತು ಸಿಎಂ ಅವರನ್ನು ಸಂಪರ್ಕಿಸಿ ಜಿಲ್ಲೆಯ 50 ಜನರನ್ನು ಸುರಕ್ಷಿತವಾಗಿ ಕರೆತರುವ ಬಗ್ಗೆ ಮನವಿ ಮಾಡಿದ್ದಾರೆ.
.ಇರಾನ್ ಪರಮೋಚ್ಚ ನಾಯಕ ಅಯಾತೊಲ್ಲಾ ಖಮೇನಿ ಹತ್ಯೆ: ಡೊನಾಲ್ಡ್ ಟ್ರಂಪ್.ಅಯಾತೊಲ್ಲಾ ಖಮೇನಿ ಮಗಳು, ಮೊಮ್ಮಗಳು, ಅಳಿಯ ಹತ್ಯೆ: ಇರಾನ್ ಮಾಧ್ಯಮಗಳ ವರದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.