ಜಾತಿ ಧರ್ಮಗಳ ಬೇಧ ಭಾವ ಇಲ್ಲದೆ ಸರ್ವಧರ್ಮೀಯರೂ ಭಾಗವಹಿಸುವ ಕೋಮು ಸೌಹಾರ್ದ ಸಾರುವ ಕಾಡಸಿದ್ದೇಶ್ವರ ಜಾತ್ರೆಯಲ್ಲಿ ಎಲ್ಲರೂ ಪಾಲ್ಗೊಳ್ಳುವುದೇ ವಿಶೇಷ
ನರೇಂದ್ರ ಸಿಂಹ ಕಾಂಗ್ರೆಸ್ ಮುಖಂಡ ತೆಕ್ಕಲಕೋಟೆ
ಗೋಪುರ ನಿರ್ಮಾಣ
ಕಾಡಸಿದ್ದೇಶ್ವರ ದೇವಾಲಯಕ್ಕೆ ಶತಮಾನಗಳಿಂದಲೂ ಗೋಪುರ ನಿರ್ಮಾಣ ಆಗಿರಲಿಲ್ಲ. ಇದರಿಂದಾಗಿ ದೇವಾಲಯದ ಗೋಪುರ ನಿರ್ಮಾಣ ಮಾಡದೇ ಯಾರೂ ಸಹ ಮೇಲಂತಸ್ತಿನ ಮನೆ ಕಟ್ಟುವ ಹಾಗಿಲ್ಲ ಎಂಬ ಪ್ರತೀತಿ ಇಲ್ಲಿತ್ತು. ಈಗ್ಗೆ 8 ವರ್ಷಗಳ ಹಿಂದೆ ಗೋಪುರ ನಿರ್ಮಾಣವಾದ ನಂತರ ಊರಿನಲ್ಲಿ ಮೇಲಂತಸ್ತಿನ ಕಟ್ಟಡಗಳು ತಲೆ ಎತ್ತಿವೆ. ಕಳೆದ ಜನವರಿ 2025ರಲ್ಲಿ ಗೋಪುರಕ್ಕೆ ಕಳಸಾರೋಹಣ ಸಹ ನಡೆಯಿತು ಇದರಿಂದಾಗಿ ಊರಿಗೆ ಒಳಿತಾಗುತ್ತದೆ ಎಂದು ಭಕ್ತರು ಸಂತಸ ವ್ಯಕ್ತಪಡಿಸುತ್ತಾರೆ.