ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲುಗು ವಿಶ್ವವಿದ್ಯಾಲಯಕ್ಕೆ ಕನ್ನಡ ಕವಿ ಸೋಮನಾಥನ ಹೆಸರು

Last Updated 10 ಅಕ್ಟೋಬರ್ 2022, 3:04 IST
ಅಕ್ಷರ ಗಾತ್ರ

ಬಳ್ಳಾರಿ: ಹೈದರಾಬಾದ್‌ನ ತೆಲುಗು ವಿಶ್ವವಿದ್ಯಾಲಯಕ್ಕೆ ತೆಲುಗು ಮತ್ತು ಕನ್ನಡ ಭಾಷೆಗಳ ಮಹಾಕವಿ ಪಾಲಕುರ್ತಿ ಸೋಮನಾಥರ ಹೆಸರನ್ನು ನಾಮಕರಣ ಮಾಡಲು ಕುಲಪತಿ ಪ್ರೊ.ತಂಗೇಡ ಕಿಶನ್‌ರಾವ್‌ ಉದ್ದೇಶಿಸಿದ್ದಾರೆ.

ಇಲ್ಲಿನ ರಾಘವ ಕಲಾ ಮಂದಿರದಲ್ಲಿ ನಡೆಯುತ್ತಿರುವ ತೆಲುಗು ಸಮೈಕ್ಯ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲು ಬಂದಿದ್ದ ತೆಲುಗು ವಿವಿ ಕುಲಪತಿ ಕಿಶನ್‌ರಾವ್‌ ಪತ್ರಕರ್ತರ ಜತೆ ಮಾತನಾಡಿದರು. ತೆಲುಗು ವಿಶ್ವವಿದ್ಯಾಲಯ ವಿಭಜನೆಯಾಗುತ್ತಿದೆ. ಆಂಧ್ರದಲ್ಲಿ ಪ್ರತ್ಯೇಕ ತೆಲುಗು ವಿವಿ ಸ್ಥಾಪನೆಯಾಗುತ್ತಿದೆ. ಈಗಿರುವ ಪೊಟ್ಟಿ ಶ್ರೀರಾಮುಲು ಹೆಸರು ಆಂಧ್ರಕ್ಕೆ ಹೋಗಲಿದೆ. ಹೀಗಾಗಿ, 12–13ನೇ ಶತಮಾನದ ತ್ರಿಭಾಷಾ ಮಹಾಕವಿ ಪಾಲಕುರ್ತಿ ಸೋಮನಾಥರ ಹೆಸರಿಡಲು ಉದ್ದೇಶಿಸಲಾಗಿದೆ. ಈತ ಕನ್ನಡ, ತೆಲುಗು ಜತೆ ಸಂಸ್ಕೃತದಲ್ಲೂ ಬರೆದಿದ್ದಾರೆ ಎಂದು ಅವರು ವಿವರಿಸಿದರು.

ವಿ.ವಿಯ ಕಾರ್ಯನಿರ್ವಾಹಕ ಮಂಡಳಿಯಲ್ಲಿ ಪಾಲಕುರ್ತಿ ಸೋಮನಾಥರ ಹೆಸರು ನಾಮಕರಣ ಪ್ರಸ್ತಾವ ಮಂಡಿಸಿ, ಒಪ್ಪಿಗೆ ಪಡೆದು ಸರ್ಕಾರಕ್ಕೆ ಕಳುಹಿಸುವುದಾಗಿ ಕಿಶನ್‌ ರಾವ್‌ ಹೇಳಿದರು.

*

ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರುವ ಕ್ರಮ ನ್ಯಾಯಸಮ್ಮತವಲ್ಲ. ಇಂಥ ಪ್ರಯತ್ನಗಳನ್ನು ಮಾಡಬಾರದು. ದಕ್ಷಿಣದ ಭಾಷೆಗಳಿಗೆ ಅವುಗಳದ್ದೇ ಆದ ವೈಶಿಷ್ಟ್ಯವಿದೆ.
–ಪ್ರೊ.ತಂಗೇಡ ಕಿಶನ್‌ರಾವ್‌, ಕುಲಪತಿ, ಹೈದರಾಬಾದ್‌ನ ತೆಲುಗು ವಿ.ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT