ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Result 2024 | ರ್‍ಯಾಂಕ್‌ನಲ್ಲಿ ಬಳ್ಳಾರಿ ಜಿಗಿತ

Published 9 ಮೇ 2024, 6:43 IST
Last Updated 9 ಮೇ 2024, 6:43 IST
ಅಕ್ಷರ ಗಾತ್ರ

ಬಳ್ಳಾರಿ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳೆದ ಬಾರಿ 31ನೇ ಸ್ಥಾನದಲ್ಲಿದ್ದ ಬಳ್ಳಾರಿ ಜಿಲ್ಲೆ ಈ ಸಲ 28ನೇ ಸ್ಥಾನಕ್ಕೇರಿದೆ.

ಪರೀಕ್ಷೆಗೆ ಹಾಜರಾದ ಒಟ್ಟು 22,219 ವಿದ್ಯಾರ್ಥಿಗಳ ಪೈಕಿ 14,441 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇದರೊಂದಿಗೆ ಜಿಲ್ಲೆಗೆ ಈ ಬಾರಿ ಶೇ 64.99 ರಷ್ಟು ಫಲಿತಾಂಶ ಸಿಕ್ಕಿದೆ. ಆದರೆ, ಕಳೆದ ಐದು ವರ್ಷಗಳಲ್ಲಿ ಜಿಲ್ಲೆಗೆ ಶೇ 80ಕ್ಕಿಂತಲೂ ಹೆಚ್ಚಿನ ಫಲಿತಾಂಶ ಸಿಕ್ಕಿತ್ತು. ಈ ಬಾರಿ ರ್‍ಯಾಂಕ್‌ನಲ್ಲಿ ಜಿಗಿತವಾಗಿದ್ದರೂ, ಶೇಕಡಾವಾರು ಫಲಿತಾಂಶದಲ್ಲಿ ಜಿಲ್ಲೆ ಭಾರಿ ಕುಸಿತ ಕಂಡಿದೆ.

ಉತ್ತಮ ಫಲಿತಾಂಶಕ್ಕಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಹೆಚ್ಚಿನ ಮತುವರ್ಜಿ ವಹಿಸಿದ್ದರು. 

ನಿರಂತರವಾಗಿ ಗೈರಾಗುತ್ತಿದ್ದ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ‘ಮರಳಿ ಶಾಲೆಗೆ ಬಾ‘ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳ ಕಲಿಕೆಗೆ ‘ಕಲಿಕಾ ಆಸೆರೆ‘, ‘ಪ್ರತಿಬಿಂಬ‘ ಎಂಬ ಪುಸ್ತಕಗಳನ್ನು ವಿತರಿಸಲಾಗಿತ್ತು. ಇದರ ಜತೆಗೆ ‘ವೃತ್ತಿ ಮಾರ್ಗದರ್ಶನ‘ ಕಾರ್ಯಗಾರಗಳನ್ನು ಏರ್ಪಡಿಸಲಾಗಿತ್ತು. ಇದೆಲ್ಲದರ ಪರಿಣಾಮವಾಗಿ ಜಿಲ್ಲೆ ಮೂರು ಸ್ಥಾನಗಳ ಜಿಗಿತ ಕಂಡಿದೆ.

ಇದು ನೈಜವಾದ, ಉತ್ತಮವಾದ ಫಲಿತಾಂಶ. ತೀವ್ರ ಪೈಪೋಟಿ ಇರುವ ಈ ಸಂದರ್ಭದಲ್ಲಿ ಒಂದು ಸ್ಥಾನ ಮೇಲೇರುವುದೇ ಕಷ್ಟ. ಅಂಥದ್ದರಲ್ಲಿ ಜಿಲ್ಲೆ ಮೂರು ಸ್ಥಾನ ಮೇಲೇರಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಪರಿಶ್ರಮಕ್ಕೆ ಫಲ ಸಿಕ್ಕಿದೆ.
– ಉಮಾದೇವಿ, ಡಿಡಿಪಿಐ, ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT