ಕುರುಗೋಡು: ಕನ್ನಡ ಚಲನಚಿತ್ರ ರಂಗ ಕಂಡ ಅಪ್ರತಿಮ ಹಾಸ್ಯ ಕಲಾವಿದ ದ್ವಾರಕೀಶ್ ಅವರು ದೈಹಿಕವಾಗಿ ನಮ್ಮಿಂದ ದೂರವಾಗಿದ್ದರೂ ಚಲನಚಿತ್ರಗಳಲ್ಲಿ ಅವರು ನಟಿಸಿದ ಹಾಸ್ಯಮಯ ಪಾತ್ರಗಳಲ್ಲಿ ಜೀವಂತವಾಗಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಚಿತ್ರನಟ ಸಾಧುಕೋಕಿಲ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಅನ್ನಪೂರ್ಣ ಕ್ರಿಯೇಷನ್ಸ್ ಭಾನುವಾರ ಆಯೋಜಿಸಿದ್ದ ದ್ವಾರಕೀಶ್ ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದ್ವಾರಕೀಶ್ ಅವರಲ್ಲಿ ಸಹಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವ ಗುಣ ಮನೆಮಾಡಿತ್ತು. ಅವರ ಹಾಸ್ಯಮಯ ನಟನೆಯ ಪ್ರಭಾವದಿಂದ ನಾನು ಚಲನಚಿತ್ರ ರಂಗದಲ್ಲಿ ಹಾಸ್ಯ ಕಲಾವಿದನಾಗಿ ಮಿಂಚಲು ಕಾರಣ’ ಎಂದರು.

‘ಹಾಸ್ಯ ಕಲಾವಿದರಾದ ಅವರಲ್ಲಿ ಒಬ್ಬ ಉತ್ತಮ ನಿರ್ದೇಶಕ ಕೂಡ ಇದ್ದ. ಅದರ ಪರಿಣಾಮವಾಗಿ ಕನ್ನಡ, ತೆಲುಗು ಚಿತ್ರಗಳ ಜತೆಗೆ ಹಿಂದಿ ಚಲನಚಿತ್ರ ರಂಗ ದೈತ್ಯ ಪ್ರತಿಭೆ ಅಮಿತಾಬ್ ಬಚ್ಚನ್ ಅವರ ಚಿತ್ರವನ್ನೂ ನಿರ್ದೇಶಿಸಿದ್ದರು’ ಎಂದು ಅವರ ಕಾರ್ಯವೈಖರಿಯನ್ನು ಮೆಲುಕು ಹಾಕಿದರು.

ಸಿರಿಗೇರಿ ಯರಿಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ದ್ಯಾವಣ್ಣ, ಉಪಾಧ್ಯಕ್ಷೆ ರಾಜಮ್ಮ ಹುಲುಗಪ್ಪ, ಉಪನ್ಯಾಸಕ ಬಕಾಟೆ ಪಂಪಾಪತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.