ಹೂವಿನಹಡಗಲಿ: ತಾಲ್ಲೂಕು ಮಟ್ಟದ ಪ್ರೌಢಶಾಲಾ ಕೊಕ್ಕೊ ಪಂದ್ಯಾವಳಿಯಲ್ಲಿ ಕುರುವತ್ತಿಯ ಚಕ್ಕಿ ಚನ್ನಪ್ಪ ಪ್ರೌಢಶಾಲೆಯ ಬಾಲಕರ ತಂಡ ಮತ್ತು ಸೋಗಿ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿವೆ.

ಪಟ್ಟಣದ ಮೌಂಟ್ ಕಾರ್ಮೆಲ್ ಶಾಲಾ ಮೈದಾನದಲ್ಲಿ ಜರುಗಿದ ತಾಲ್ಲೂಕು ಮಟ್ಟದ ಪಂದ್ಯಾವಳಿಯ ಫೈನಲ್‌ನಲ್ಲಿ ಕುರುವತ್ತಿಯ ಬಾಲಕರ ತಂಡ ಮಹಾಜನದಹಳ್ಳಿ ಬಾಲಕರ ತಂಡ ಗೆಲುವಿಗಾಗಿ ರೋಚಕ ಹೋರಾಟ ನಡೆಯಿತು. ಅಂತಿಮವಾಗಿ ಕುರುವತ್ತಿಯ ಬಾಲಕರ ಗೆಲುವು ಸಾಧಿಸಿದರು.

ಬಾಲಕಿಯರ ಫೈನಲ್‌ನಲ್ಲಿ ಸೋಗಿ ಸರ್ಕಾರಿ ಪ್ರೌಢಶಾಲೆಯ ತಂಡ ನಾಗತಿಬಸಾಪುರ ಸರ್ಕಾರಿ ಪ್ರೌಢಶಾಲೆ ತಂಡದ ವಿರುದ್ಧ ಜಯ ಗಳಿಸಿ ಜಿಲ್ಲಾ ಮಟ್ಟ ಪ್ರವೇಶಿಸಿತು.

ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರಫಿ ಅಹ್ಮದ್ ಖವಾಸ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ವಿ.ಹನುಮಂತಪ್ಪ ಮಾತನಾಡಿ, ಗ್ರಾಮೀಣ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಳಗಲಿ’ ಎಂದು ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.