ಕಂಪ್ಲಿ: ನಮ್ಮಿಂದಲೇ ನಮಗಾಗಿಯೇ ತೆರೆದುಕೊಳ್ಳುವ, ಭಾವನೆಗಳು ಹೊರಹೊಮ್ಮವ, ಸಾಮಾಜಿಕ ಸಮಸ್ಯೆಗಳನ್ನು, ವಿವಿಧ ವಿಷಯ ನೈಜ ಘಟನೆಗಳನ್ನು ಕಥೆಯಾಗಿಸಿ ಅದನ್ನು ಅಭಿವ್ಯಕ್ತಗೊಳಿಸುವ, ನಮ್ಮನ್ನು ಅದರಲ್ಲಿ ಒಳಪಡಿಸಿಕೊಳ್ಳುವ ರೀತಿ ಮತ್ತು ನಮ್ಮಿಂದಲೇ ಸಮಸ್ಯೆಯ ಪರಿಹಾರದ ಹಾದಿ ತೆರೆದುಕೊಳ್ಳುವಂತಾಗಿಸುವ ಪರಿ ನೆರೆದಿದ್ದವರೆಲ್ಲರಿಗೂ ಮನ ಮುಟ್ಟುವಂಥ ಹೊಸ ಅನುಭವವನ್ನು ಕೊಟ್ಟಿತು.

ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿರಿಗೇರಿಯ ಅನ್ನಪೂರ್ಣ ಕ್ರಿಯೇಷನ್ಸ್ ಹಾಗೂ ಕಂಪ್ಲಿಯ ಕನ್ನಡ ಹಿತರಕ್ಷಕ ಸಂಘಗಳ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಅವರ ಏಕ ವ್ಯಕ್ತಿ ರಂಗ ಪ್ರದರ್ಶನ ‘ಲೀಕ್ ಔಟ್’ ಪ್ರೇಕ್ಷಕನನ್ನೇ ಈ ರೀತಿ ಪಾತ್ರಧಾರಿಯಾಗಿಸಿದ್ದು ವಿಶೇಷ.

ಇದಕ್ಕು ಮುನ್ನ ಅಕ್ಷತಾ ಮಾತನಾಡಿ, ‘ಲೀಕ್ ಔಟ್’ 120ನೇ ಪ್ರಯೋಗವಾಗಿದ್ದು, ಈ ನಾಟಕದ ಎಲ್ಲೆ, ಪಾತ್ರ ಮೀರಿದ್ದಾಗಿದೆ. ಕಂಡವರ ವಿಷಯಗಳ ಮೇಲೆ ಹೆಚ್ಚಿನ ಆಸಕ್ತಿ ತೋರುವುದು, ಸ್ತ್ರೀಯರ ಮೇಲೆ ಕಟ್ಟುಪಾಡುಗಳನ್ನು ಹೇರಿರುವುದು, ಸಮಾಜದ ಕಟ್ಟುಪಾಡುಗಳಿಗೆ ಕಟ್ಟು ಬಿದ್ದು ಬದಲಾಗದಿರುವುದು ಮೊದಲಾದ ಪುರುಷ, ಮಹಿಳೆಯರ ಒಳ ತುಮುಲಗಳನ್ನು ಹೊರಗೆಳೆಯುವಲ್ಲಿ ಪ್ರಯೋಗ ಯಶಸ್ವಿಯಾಗಿದೆ’ ಎಂದರು.

‘ರಂಗಮಂದಿರದಿಂದ ದೂರವಾಗಿರುವ ಪ್ರೇಕ್ಷಕರ ಮನಸ್ಸನ್ನು ಅರಿತು ಅವರ ಬಳಿಗೆ ತೆರಳಿ ಪ್ರಯೋಗದ ಮೂಲಕ ಸಮಾಜದ ವಿವಿಧ ಪಾತ್ರಗಳ ಆಂತರ್ಯ ಅರಿಯುವ ಪ್ರಯತ್ನದಲ್ಲಿದ್ದೇನೆ’ ಎಂದು ವಿವರಿಸಿದರು.

ಕನ್ನಡ ಹಿತರಕ್ಷಕ ಸಂಘದ ಗೌರವ ಅಧ್ಯಕ್ಷ ಕ.ಮ. ಹೇಮಯ್ಯಸ್ವಾಮಿ ರಂಗ ಪ್ರಯೋಗಕ್ಕೆ ಚಾಲನೆ ನೀಡಿ, ‘ಕತೆಯನ್ನು ಪ್ರೇಕ್ಷರಿಗೆ ವಿವರಿಸುತ್ತಲೇ ಪ್ರೇಕ್ಷಕರ ಮನದಾಳದ ಆಶಯಗಳನ್ನು ಅರಿಯುವ ನಟಿ ಅಕ್ಷತಾ ಅವರ ರಂಗ ಪ್ರಯೋಗ ವಿಭಿನ್ನವಾಗಿದೆ’ ಎಂದರು.

‘ಲೀಕ್ ಔಟ್’ ಕತೆಗಳ ಸಮಸ್ಯೆಗಳಿಗೆ ನಮ್ಮನ್ನು ನಾವೇ ತೆರೆದುಕೊಳ್ಳುತ್ತೇವೆ. ಘಟನೆಗಳಲ್ಲಿನ ನಾಯಕ ನಾಯಕಿಯರು ನಾವೇ ಆಗುತ್ತೇವೆ, ಕತೆಗಳ ಪಾತ್ರಗಳು ನಾವಾಗಿ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳುತ್ತೇವೆ. ಈ ರೀತಿಯ ವಿಶೇಷ ರಂಗ ಪ್ರಯೋಗ ಅಕ್ಷತಾ ಅವರಿಂದ ಮಾತ್ರ ಸಾಧ್ಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಭಾರ ಪ್ರಾಚಾರ್ಯ ಕೆ. ಮಹೇಶ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಹಿತರಕ್ಷಕ ಸಂಘದ ಅಧ್ಯಕ್ಷ ಬೂದಗುಂಪಿ ಅಂಬಣ್ಣ, ನಿರ್ದೇಶಕ ಕೆ. ಯಂಕಾರೆಡ್ಡಿ, ಸಹಾಯಕ ಪ್ರಾಧ್ಯಾಪಕರಾದ ಅನ್ನಪೂರ್ಣ ಗುಡದೂರ, ಎಂ.ಪಿ. ಬಾಲಾಜಿ, ಟಿ.ಎಂ.ಆರ್. ರಾಜ್ಮಾ, ಖಲೀಲ್, ಗ್ರಂಥಪಾಲಕ ಎ.ಜಿ. ವೀರಭದ್ರಪ್ಪ, ಪ್ರಮುಖರಾದ ಎಸ್.ಡಿ. ಬಸವರಾಜ, ಅಶೋಕ ಕುಕನೂರು, ಡಾ. ಶಾರದಾ ಜಗನ್ನಾಥ ಹಿರೇಮಠ, ಕಲ್ಗುಡಿ ನಾಗರತ್ನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.