ಹೂವಿನಹಡಗಲಿ: ಇಲ್ಲಿನ ಉಪ ಕಾರಾಗೃಹಕ್ಕೆ ಬಳ್ಳಾರಿ, ವಿಜಯನಗರ ಜಿಲ್ಲಾ ಲೋಕಾಯುಕ್ತ ಎಸ್ಪಿ ಸಿದ್ದರಾಜು ಬುಧವಾರ ಭೇಟಿ ನೀಡಿ, ಹಿಂದಿನ ಜೈಲು ಅಧೀಕ್ಷಕರ ಅವಧಿಯ ದಾಖಲೆಗಳನ್ನು ಪರಿಶೀಲಿಸಿದರು.
ಇತ್ತೀಚೆಗಷ್ಟೇ ಇಲ್ಲಿಂದ ವರ್ಗಾವಣೆಯಾಗಿರುವ ಅಧೀಕ್ಷಕ ಶರಣಬಸವ ಇನಾಂದಾರ್ ಅವರು ಬಂದಿಗಳಿಗೆ ಆಹಾರ ಪೂರೈಕೆಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ವಿಚಾರಣಾಧೀನ ಕೈದಿಯಾಗಿದ್ದ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ನಿರ್ದಿಷ್ಟ ಅವಧಿಯ ಕೆಲವು ದಾಖಲೆಗಳನ್ನು ಹಾಜರುಪಡಿಸಲು ಅಧಿಕಾರಿಗಳಿಗೆ ಸಿದ್ದರಾಜು ಸೂಚಿಸಿದರು.
ಕಾರಾಗೃಹ ಅಧೀಕ್ಷಕ ಐ.ಜೆ. ಕುಕನೂರು, ಜೈಲು ಅಧಿಕಾರಿ ಪ್ರಕಾಶ್ ಕಾಂಬಳೆ ಇದ್ದರು.