ವಿಜಯನಗರ (ಹೊಸಪೇಟೆ): ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಯೋಜನೆ ಅಡಿ ನಗರದಲ್ಲಿ ಅಳವಡಿಸಲು ₹2 ಕೋಟಿ ಮೊತ್ತದ ವಿದ್ಯುತ್ ದೀಪಗಳನ್ನು ದೇಣಿಗೆ ನೀಡಿದ ದಾನಿಗಳ ಸನ್ಮಾನ ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆಯಿತು.

ಆರ್.ಬಿ.ಎಸ್.ಎಸ್.ಎನ್, ಪಿಬಿಎಸ್ ಅಂಡ್ ಸನ್, ಸ್ಮಯೋರ್ ಹಾಗೂ ವೆಸ್ಕೊ ಸಂಸ್ಥೆಯ ಅಜಿತ್ ಕುಮಾರ್, ಬಸವರಾಜ, ಮಲ್ಲಿ, ಧನಂಜಯ್ ಹಾಗೂ ಸಂತೋಷ್ ಅವರನ್ನು ಸತ್ಕರಿಸಲಾಯಿತು.

ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮನ್ಸೂರ್ ಅಲಿ ಮಾತನಾಡಿ, ‘ವಿದ್ಯುತ್ ಉಳಿತಾಯ ಯೋಜನೆ ಅಡಿಯಲ್ಲಿ ನಗರದ ವಿವಿಧ ಭಾಗಗಳಲ್ಲಿ ಹೊಸ ಎಲ್ಇಡಿ ದೀಪಗಳನ್ನು ಅಳವಡಿಸಲಾಗುತ್ತಿದೆ. ₹2 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಯ ಸುರಂಗ ಮಾರ್ಗದ ಎರಡು ಕಡೆ ಹೈಮಾಸ್ಟ್ ದೀಪ, ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪ ಅಳವಡಿಸಲಾಗುವುದು. ಪ್ರತಿ ತಿಂಗಳು ನಗರಸಭೆಯು ಜೆಸ್ಕಾಂಗೆ ₹40 ಲಕ್ಷ ಬೀದಿ ದೀಪಗಳ ವಿದ್ಯುತ್ ಬಿಲ್ ತುಂಬುತ್ತದೆ. ಹೊಸ ದೀಪಗಳಿಂದ ಶೇ 50ರಷ್ಟು ಹಣ ಉಳಿತಾಯ ಆಗಲಿದೆ’ ಎಂದು ಹೇಳಿದರು.

ಹುಡಾ ಅಧ್ಯಕ್ಷ ಅಶೋಕ್ ಜೀರೆ, ಡಿವೈಎಸ್ಪಿ ವಿ.ರಘುಕುಮಾರ್, ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಮಹಾಂತೇಶ್ ಸಜ್ಜನ್, ಪಟ್ಟಣ ಠಾಣೆ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಮೇಟಿ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್, ಸಂದೀಪ್ ಸಿಂಗ್, ಧರ್ಮೇಂದ್ರ ಸಿಂಗ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.