ಬಳ್ಳಾರಿ: ಶ್ರೀರಾಮಕೃಷ್ಣಾಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತೀ ಅವರಿಂದ ವಿವೇಕಮಂಟಪ ಉಪನ್ಯಾಸ ಮಾಲಿಕೆ ‘ವಿವೇಕ ಲೀಲಾಮೃತ’ವು ಜ.4ರಿಂದ 13ರವರೆಗೆ ಇಲ್ಲಿನ ಡಾ.ರಾಜ್ಕುಮಾರ್ ರಸ್ತೆಯಲ್ಲಿರುವ ರಾಘವ ಕಲಾ ಮಂದಿರದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉಪನ್ಯಾಸ ಮಾಲಿಕೆ ಸ್ವಾಗತ ಸಮಿತಿಯ ಸಂಚಾಲಕ ಕೆ.ರಾಜಶೇಖರ್ ಹಾಗೂ ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು, ‘ನಿತ್ಯ ಸಂಜೆ 5.45ರಿಂದ 8.15ರವರೆಗೆ ಕಾರ್ಯಕ್ರಮ ಜರುಗಲಿದೆ’ ಎಂದರು.

‘ಮೊದಲ ದಿನದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮೇಯರ್ ಪಿ.ಗಾದೆಪ್ಪ, ಹೃದಯತಜ್ಞ ಡಾ.ನರೇಂದ್ರಗೌಡ ಇರುವರು. 10 ದಿನಗಳ ಕಾರ್ಯಕ್ರಮದಲ್ಲಿ ಯಾವುದೇ ಅತಿಥಿಗಳ ಭಾಷಣ ಇರುವುದಿಲ್ಲ. 15 ನಿಮಿಷಗಳ ಭಕ್ತಿಸಂಗೀತದ ಬಳಿಕ ನೇರವಾಗಿ ಸ್ವಾಮೀಜಿಗಳು ಉಪನ್ಯಾಸ ಆರಂಭಿಸಲಿದ್ದಾರೆ. 10 ದಿನಗಳ ಸಂಜೆಯ ಉಪನ್ಯಾಸಗಳ ನಡುವೆ ಬೆಳಗಿನ ಜಾವ ನಗರದ ಎರಡು ಎಂಜಿನಿಯರಿಂಗ್ ಕಾಲೇಜುಗಳು, ವಿವಿಧ ಪದವಿ ಕಾಲೇಜುಗಳಲ್ಲಿ ಉಪನ್ಯಾಸ ನೀಡುವರು. ಒಂದು ದಿನ ಪ್ರತ್ಯೇಕವಾಗಿ ಮಹಿಳೆಯರಿಗೆ ‘ಭಾರತೀಯ ಮಹಿಳೆ’ ವಿಷಯ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ. ಪತ್ರಕರ್ತರಿಗೆ ಒಂದು ದಿನದ ಮಟ್ಟಿಗೆ ಉಪನ್ಯಾಸ ನಡೆಸಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.

‘ನಿರ್ಭಯಾನಂದ ಶ್ರೀಗಳು ಮೂರು ವರ್ಷಗಳ ಬಳಿಕ ಬಳ್ಳಾರಿಯಲ್ಲಿ ಉಪನ್ಯಾಸ ಮಾಲಿಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಬಳ್ಳಾರಿಯ ಭಕ್ತರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿರುವ ಶ್ರೀಗಳು, ಈ ಬಾರಿ ಬಳ್ಳಾರಿಯಲ್ಲಿ ಉಪನ್ಯಾಸ ನೀಡಲು ಒಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದರು.

ಸ್ವಾಗತ ಸಮಿತಿಯ ಸದಸ್ಯ ಲೆಕ್ಕಪರಿಶೋಧಕ ಸಿದ್ಧರಾಮೇಶ್ವರಗೌಡ ಕರೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.