ಹೊಸಪೇಟೆ: ಇಲ್ಲಿನ ಬಿಜೆಪಿ ಮಂಡಲದಿಂದ ಮಂಗಳವಾರ ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಪಂಡಿತ ದೀನದಯಾಳ್ ಉಪಾಧ್ಯಾಯ ಅವರ ಜನ್ಮ ದಿನ ಆಚರಿಸಲಾಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ ಅವರು ಉಪಾಧ್ಯಾಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಇತ್ತೀಚೆಗೆ ಚಿತ್ತವಾಡ್ಗಿಯ ಪೀರಲ ಮೆರವಣಿಗೆ ಸಂದರ್ಭದಲ್ಲಿ ಕಟ್ಟಡದ ಸಜ್ಜ ಕುಸಿದು ಗಾಯಗೊಂಡಿದ್ದ ಗಾಯಾಳುಗಳಿಗೆ ಹಾಲು, ಬ್ರೆಡ್ ವಿತರಿಸಿದರು. ಗಾಯಗೊಂಡವರಿಗೆ ಉತ್ತಮ ರೀತಿಯಲ್ಲಿ ಉಪಚಾರ ಮಾಡಿದ ವೈದ್ಯರಿಗೆ ಸನ್ಮಾನಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಅನಂತ ಪದ್ಮನಾಭ, ಪ್ರಧಾನ ಕಾರ್ಯದರ್ಶಿ ಬಸವರಾಜ ನಾಲತ್ವಾಡ, ಮುಖಂಡರಾದ ಗೋವಿಂದರಾಜು, ಜಂಬಾನಹಳ್ಳಿ ವಸಂತ, ಪಂಚಪ್ಪ, ತಿಪ್ಪೇಸ್ವಾಮಿ, ನಾಗೇನಹಳ್ಳಿ ಚಂದ್ರಶೇಖರ್, ಮನೋಹರ್ ಗುಪ್ತಾ, ಬಿ. ಶಂಕರ್, ಶಂಕರ್ ಮೇಟಿ, ಹನುವಾಳ್ ದೇವರಾಜ್, ಆಶಾರಾಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.