ಮಂದಗತಿಯಲ್ಲಿ ಕುಡುತಿನಿ ರೈಲ್ವೆ ಸೇತುವೆ ಕಾಮಗಾರಿ: ಜನರ ಆಕ್ರೋಶ
ಎರ‍್ರಿಸ್ವಾಮಿ ಬಿ.
Published : 6 ಅಕ್ಟೋಬರ್ 2025, 4:34 IST
Last Updated : 6 ಅಕ್ಟೋಬರ್ 2025, 4:34 IST
ಫಾಲೋ ಮಾಡಿ
Comments
ಕುಡುತಿನಿಯಿಂದ ಕುರುಗೋಡು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಸೇತುವೆ ವಿಳಂಬ ಕಾಮಗಾರಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದು ಸೂಕ್ತ ಕ್ರಮವಹಿಸಲಾಗುವುದು
ಟಿ.ರೇಖಾ, ತಹಶೀಲ್ದಾರ್, ಬಳ್ಳಾರಿ
ರೈಲ್ವೆ ಸೇತುವೆಯ ಕಾಮಗಾರಿಯು ಹಲವಾರು ವರ್ಷಗಳಿಂದ ಕುಂಟುಂತ್ತಾ ಸಾಗಿದ್ದು, ಜನರು ನಿತ್ಯದ ಸಂಚಾರಕ್ಕಾಗಿ ಪರಿತಪಿಸುತ್ತಿದ್ದಾರೆ. ರೈಲ್ವೆ ಇಲಾಖೆಯ ಅಧಿಕಾರಿಗಳು ಶೀಘ್ರವಾಗಿ ಕಾಮಗಾರಿಯನ್ನುಪೂರ್ಣಗೊಳಿಸಬೇಕು
ಆರ್.ರಾಮಲಿಂಗಪ್ಪ, ಕುಡತಿನಿ ಪಟ್ಟಣದ ನಿವಾಸಿ
ಈ ಸೇತುವೆ ನಿರ್ಮಾಣ ನಿಧಾನವಾಗಿರುವುದರಿಂದ ನಿತ್ಯದ ಸಂಚಾರಕ್ಕಾಗಿ ರೈತರು, ವಿದ್ಯಾರ್ಥಿಗಳು, ಕಾರ್ಮಿಕರು ಪರದಾಡುತ್ತಿದ್ದಾರೆ. ತ್ವರಿತವಾಗಿ ಪೂರ್ಣಗೊಳಿಸಲು ಜಿಲ್ಲಾಡಳಿತ, ಜನ ಪ್ರತಿನಿಧಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು
ಉಪ್ಪಾರು ತಿಮ್ಮಪ್ಪ, ಕುಡತಿನಿಯ ನಿವಾಸಿ
ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಕುಡುತಿನಿಯ ರೈಲ್ವೆ ನಿಲ್ದಾಣಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸಿ, ಅಮೃತ ರೈಲ್ವೆ ನಿಲ್ದಾಣವನ್ನು ನಿರ್ಮಿಸಬೇಕು.
ಕೆ.ಎಂ.ಹಾಲಪ್ಪ, ಕುಡತಿನಿಯ ನಿವಾಸಿ
ಕುರುಗೋಡು ಪಟ್ಟಣಕ್ಕೆ ತೆರಳಲು ರಸ್ತೆಯ ಸಮಸ್ಯೆ ಉಂಟಾಗಿದ್ದರಿಂದ ಸಾರಿಗೆ ಬಸ್‍ಗಳ ಸಂಚಾರ ವಿರಳವಾಗಿದೆ. ಜನರು, ವಿದ್ಯಾರ್ಥಿಗಳು ಸಂಚಾರಕ್ಕೆ ತೊಂದರೆಯಾಗಿದ್ದು, ರೈಲ್ವೆ ಇಲಾಖೆಯವರು ಸೇತುವೆಯ ಕಾಮಗಾರಿಯನ್ನು ಪೂರ್ಣಗೊಳಿಸಬೇಕು