ಕುರುಗೋಡು: ಪಟ್ಟಣದ ಸಿಂಧಿಗೇರಿ ರಸ್ತೆಯ ಮಲ್ಲಪ್ಪನ ಕೆರೆಯಲ್ಲಿ ಕೃಷಿ ಮಾಡುತ್ತಿರುವವರಿಗೆ ಸಾಗುವಳಿ ಪತ್ರ ನೀಡಬೇಕು ಎಂದು ಒತ್ತಾಯಿಸಿ ನವೆಂಬರ್ 23ರಿಂದ ರೈತರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಶಾಸಕ ಜೆ.ಎನ್.ಗಣೇಶ್ ಮಂಗಳವಾರ ಭೇಟಿ ನೀಡಿದರು.

50 ವರ್ಷಗಳಿಂದ ಈ ಭೂಮಿಯಲ್ಲಿ 204 ರೈತರು ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅವರಲ್ಲಿ ಬಹುತೇಕರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಮುಂದಿನ ತಿಂಗಳು ನಡೆಯುವ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆ ಕುರಿತು ಚರ್ಚೆ ನಡೆಸಬೇಕು. ಅವರಿಗೆ ಸಾಗುವಳಿ ಪತ್ರ ನೀಡಬೇಕು, ಕೆರೆ ಎನ್ನುವ ಪದವನ್ನು ತೆಗೆದುಹಾಕಿ ಸರ್ಕಾರ ಎಂದು ನಮೂದು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಶಾಸಕ ಜೆಎನ್.ಗಣೇಶ್, ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.

ವಿ.ಎಸ್.ಶಿವಶಂಕರ್, ಗಾಳಿ ಬಸವರಾಜ, ಎನ್.ಸೋಮಣ್ಣ, ರಂಗಪ್ಪ, ಷಣ್ಮುಖ, ಕೊಮಾರೆಪ್ಪ, ಎಚ್.ಸೀನಪ್ಪ, ಎನ್.ಹುಲೆಪ್ಪ, ಎ.ಮಂಜುನಾಥ, ಎಚ್.ಯಂಕಮ್ಮ, ಕಟಿಗೇರು ಬಸವರಾಜ, ಎಂ.ಆರ್.ರುದ್ರಪ್ಪ, ಎನ್.ರಾಮಣ್ಣ, ಭೀಮಯ್ಯ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.