ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಬಿ.ಇಡಿ ಪದವಿಯ ಫಲಿತಾಂಶವನ್ನು ಮೌಲ್ಯಮಾಪನ ಮುಗಿದ ಒಂದು ದಿನದಲ್ಲೆ ಘೋಷಿಸಿದೆ.

ಕಳೆದ ತಿಂಗಳು ಮುಕ್ತಾಯಗೊಂಡಿದ್ದ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ನ ಬಿ.ಇಡಿ ಪದವಿ ಮೌಲ್ಯಮಾಪನವನ್ನು ಸತತ 10 ದಿನಗಳಲ್ಲಿ ಪೂರೈಸಿ ಫಲಿತಾಂಶವನ್ನು ಯುಯುಸಿಎಂಎಸ್ನಲ್ಲಿ ಇಂದು ಪ್ರಕಟಿಸಿದೆ.

ವಿವಿ ಅಧೀನದಲ್ಲಿರುವ 14 ಕಾಲೇಜುಗಳ ಸುಮಾರು 2,500 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಅವರು ಬರೆದಿದ್ದ 15,000 ಉತ್ತರ ಪತ್ರಿಕೆಗಳನ್ನು ಬಿ.ಇಡಿ ಕೋರ್ಸಿನ 42 ಮೌಲ್ಯಮಾಪಕರು ನಿರಂತರವಾಗಿ ಮೌಲ್ಯಮಾಪನ ಮಾಡಿದ್ದರು.

ಕುಲಪತಿ ಪ್ರೊ.ಎಂ ಮುನಿರಾಜು ‘ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶೀಘ್ರ ಫಲಿತಾಂಶ ಪ್ರಕಟಿಸಲು ವಿಶ್ವವಿದ್ಯಾಲಯ ಕ್ರಮ ತೆಗೆದುಕೊಂಡಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.