ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಂಪ್ಲಿ ರಸ್ತೆ ಅಭಿವೃದ್ಧಿಗೆ ₹ 40ಕೋಟಿ ಮಂಜೂರು

Published : 19 ಸೆಪ್ಟೆಂಬರ್ 2024, 15:43 IST
Last Updated : 19 ಸೆಪ್ಟೆಂಬರ್ 2024, 15:43 IST
ಫಾಲೋ ಮಾಡಿ
Comments

ಕಂಪ್ಲಿ: ‘ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಟ್ಟಣದ ರಸ್ತೆ ಅಭಿವೃದ್ಧಿಗೆ ₹ 40ಕೋಟಿ ಮಂಜೂರಾಗಿದೆ’ ಎಂದು ಶಾಸಕ ಜೆ.ಎನ್. ಗಣೇಶ್ ತಿಳಿಸಿದರು.

ಇಲ್ಲಿಯ ವಾಲ್ಮೀಕಿ ವೃತ್ತ ಬಳಿ ₹20ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಗುರುವಾರ ಚಾಲನೆ ನೀಡಿ, ಇಲ್ಲಿಯ ಐತಿಹಾಸಿಕ ಸೋಮಪ್ಪ ಕೆರೆ ಅಭಿವೃದ್ಧಿಗೆ ಹೆಚ್ಚುವರಿ ₹ 2ಕೋಟಿ ಒಪ್ಪಿಗೆ ದೊರೆತಿದೆ’ ಎಂದರು.

‘ತಾಲ್ಲೂಕಿನ ವಿವಿಧ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಿ ಅನುದಾನ ಒದಗಿಸಿ ರಸ್ತೆಗಳ ಏಳಿಗೆಗೆ ಶ್ರಮಿಸುತ್ತಿದ್ದೇನೆ. ಆದರೆ, ಟ್ರ್ಯಾಕ್ಟರ್ ಚಾಲಕರು ಹೊಲ ಹದಗೊಳಿಸಲು ಕೇಜ್ ವೀಲ್‌ ಅಳವಡಿಸಿ ರಸ್ತೆ ಮೇಲೆ ಸಾಗುವುದರಿಂದ ಹಾಳಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಪಿ.ಮೂಕಯ್ಯಸ್ವಾಮಿ, ಭಟ್ಟ ಪ್ರಸಾದ್, ಕೆ.ಎಸ್. ಚಾಂದ್‍ಬಾಷ, ವೀರಾಂಜನೇಯಲು, ಕೆ.ಮಸ್ತಾನ್‍ಸಾಬ್, ಎ.ಸಿ.ದಾನಪ್ಪ, ಕಲ್ಗುಡಿ ವಿಜಯಕುಮಾರ್, ಡಿ. ಮೌನೇಶ, ಹೊನ್ನಳ್ಳಿ ಶ್ರೀದೇವಿ, ಬಳೆ ಮಲ್ಲಿಕಾರ್ಜುನ, ಬಿ.ಜಾಫರ್, ಅಬ್ದುಲ್ ವಾಹೀದ್, ಸತ್ಯಪ್ಪ ಆಟೊ ರಾಘವೇಂದ್ರ, ಕನಕಗಿರಿ ರೇಣುಕಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT