ಬಳ್ಳಾರಿ: ‘ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ವಿಶೇಷ ತನಿಖಾ ದಳದ ಅಧಿಕಾರಿಗಳು ವಿಚಾರಣೆ ನಡೆಸಿದ್ದು ನಿಜ. ತನಿಖೆಗೆ ಎಲ್ಲ ಸಹಕಾರ ನೀಡುತ್ತಿದ್ದೇನೆ’ ಎಂದು ಬಳ್ಳಾರಿಯ ರೊದ್ದಂ ಜುವೆಲ್ಸ್ ಮಾಲೀಕ ಗೋವರ್ಧನ್ ಹೇಳಿದ್ದಾರೆ.

ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬಳ್ಳಾರಿಗೆ ಬಂದಿದ್ದ ಕೇರಳ ಎಸ್ಐಟಿ ತಂಡ, ರೊದ್ದಂ ಜುವೆಲ್ಸ್ ಮಾಲೀಕರ ಬಳಿ ದಾಖಲೆಗಳನ್ನು ಪರಿಶೀಲಿಸಿದ್ದರು.

ಈ ಕುರಿತು ಶನಿವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಗೋವರ್ಧನ್, ‘ಎಸ್ಐಟಿ ಅಧಿಕಾರಿಗಳು ಒಮ್ಮೆ ತಿರುವನಂತಪುರಕ್ಕೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಸದ್ಯ ಬಳ್ಳಾರಿಗೆ ಬಂದು ದಾಖಲೆಗಳ ಪರಿಶೀಲಿಸಿದ್ದಾರೆ. ಮಾಧ್ಯಮಗಳೊಂದಿಗೆ ವಿಚಾರ ಹಂಚಿ
ಕೊಳ್ಳಬಾರದು ಎಂದು ತಾಕೀತು ಮಾಡಿದ್ದು, ಹೆಚ್ಚು ಮಾತನಾಡುವುದಿಲ್ಲ’ ಎಂದರು.

‘ಸತತ 35 ವರ್ಷಗಳಿಂದಲೂ ನಾನು ಶಬರಿಮಲೆಯನ್ನು ಆರಾಧಿಸುತ್ತಿದ್ದೇನೆ. ಅಲ್ಲಿ ಕನ್ನಡ ಮಾತನಾಡುತ್ತಿದ್ದ ಉನ್ನಿಕೃಷ್ಣನ್ ನನಗೆ ಪರಿಚಯವಾಗಿದ್ದರು. 2019ರಲ್ಲಿ ಮುಖ್ಯ ದೇಗುಲದ ಬಾಗಿಲು ಮತ್ತು ಇತರೆ ವಸ್ತುಗಳನ್ನು ಮಾಡಿಕೊಡುವಂತೆ ಮನವಿ ಮಾಡಿದ್ದರು. ನಾನು ಅದನ್ನು ದೇಣಿಗೆಯಾಗಿ ಮಾಡಿಕೊಟ್ಟಿದ್ದೇನೆ. ಆದರೆ, ಅದನ್ನು ಉನ್ನಿಕೃಷ್ಣನ್ ಹೆಸರಿನಲ್ಲಿ ನೀಡಿದ್ದೇನೆ’ ಎಂದು ಹೇಳಿದರು.

‘ದೇಗುಲಕ್ಕೆ ದ್ವಾರಪಾಲಕರನ್ನು ಮಾಡಿಕೊಡುವಂತೆ ಮತ್ತೆ ನನಗೆ ಕೇಳಿಕೊಳ್ಳಲಾಗಿತ್ತು. , ಅದು ನನ್ನಿಂದ ಸಾಧ್ಯವಾಗಿಲ್ಲ. ಚಿನ್ನ ಕಳ್ಳತನ ಪ್ರಕರಣ 2019ರಲ್ಲೇ ನಡೆದಿದೆ. ಹೀಗಾಗಿ ಆ ವರ್ಷದ ವ್ಯವಹಾರಗಳನ್ನು ಎಸ್ಐಟಿ ತನಿಖೆ ಮಾಡುತ್ತಿದೆ. ಆದ್ದರಿಂದ ನನ್ನನ್ನು ವಿಚಾರಣೆ ಮಾಡಲಾಗುತ್ತಿದೆ. ಉಳಿದಂತೆ ನನ್ನ ಪಾತ್ರ ಬೇರೆ ಏನೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಕೇರಳ ಪೊಲೀಸರು ಬಳ್ಳಾರಿಗೆ ಬಂದರೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ, ‘ನೋಟಿಸ್ ಕೊಡುವ ಸಲುವಾಗಿ ಮಾತ್ರ ಕೇರಳ ಪೊಲೀಸರು ಬಳ್ಳಾರಿಗೆ ಬಂದಿದ್ದಾರೆ. ಬಂಧನ ಪ್ರಕ್ರಿಯೆ ಮಾಡಿಲ್ಲ. ಹೀಗಾಗಿ ಅವರು ನಮ್ಮ ನೆರವು ಕೋರಿಲ್ಲ’ ಎಂದು ತಿಳಿಸಿದರು.
.ಕರ್ನಾಟಕದ ಕೋಟ್ಯಧಿಪತಿ ಬಳಿ ಅಯ್ಯಪ್ಪನ ಚಿನ್ನ: ಕೇರಳ ಕಾಂಗ್ರೆಸ್ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.