ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿರುಗುಪ್ಪ: ನದಿ ತುಂಬಿ ಹರಿದರೂ ಕಾಲುವೆ ಕೊನೆಗೆ ನೀರಿಲ್ಲ!

ಡಿ.ಮಾರೆಪ್ಪನಾಯಕ
Published : 10 ಆಗಸ್ಟ್ 2024, 5:38 IST
Last Updated : 10 ಆಗಸ್ಟ್ 2024, 5:38 IST
ಫಾಲೋ ಮಾಡಿ
Comments

ಸಿರುಗುಪ್ಪ: ಉತ್ತಮ ಮಳೆಯಿಂದಾಗಿ ತುಂಗಭದ್ರಾ ಜಲಾಶಯ ಕಳೆದ ತಿಂಗಳಿಂದ ಭರ್ತಿಯಾಗಿದೆ. ಈ ಬಾರಿ ಮುಂಚಿತವಾಗಿಯೇ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ನೀರು ಹರಿಸಲಾಗಿದೆ. ಆದರೆ, ಸಿರುಗುಪ್ಪ ತಾಲ್ಲೂಕಿನ ಬಲದಂಡೆ ನಾಲೆಯ ಬಾಗೇವಾಡಿ ಕಾಲುವೆಯ ಕೊನೆ ಭಾಗಕ್ಕೆ ಇದುವರೆಗೂ ನೀರು ಹರಿದಿಲ್ಲ ಎನ್ನುವುದು ರೈತರ ಬವಣೆ.

ತಾಲ್ಲೂಕಿನ ಶಾನವಾಸಪುರ ಗ್ರಾಮದಿಂದ, ತೆಕ್ಕಲಕೋಟೆ, ಸಿರುಗುಪ್ಪಮತ್ತು ಬಾಗೇವಾಡಿ ಭಾಗಕ್ಕೆ 10ಸಾವಿರ ಎಕರೆಗೆ ನೀರಾವರಿ ಕಲ್ಪಿಸಲಾಗಿದೆ. ಪ್ರತಿವರ್ಷ ಈ ಕಾಲುವೆ ನೀರಿನಿಂದ ಭತ್ತ, ಹತ್ತಿ, ಮೆಣಸಿನಕಾಯಿ ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆ ಬೆಳೆಯಲಾಗುತ್ತದೆ.

ಆದರೆ, ಇತ್ತೀಚಿನ ವರ್ಷಗಳಲ್ಲಿ ತೆಕ್ಕಲಕೋಟೆ, ಬಂಗಾರರಾಜ್ ಕ್ಯಾಂಪ್, ಬಲಕುಂದಿ, ಉಪ್ಪಾರಹೊಸಳ್ಳಿ, ಪೊಪ್ಪನಹಾಳ್, ಅರಳಿಗನೂರು, 64 ಹಳೆಕೋಟೆ, ಸಿರುಗುಪ್ಪ, ಬಾಗೇವಾಡಿ ನಾಲೆ ಕೊನೆ ಭಾಗಕ್ಕೆ ಸರಿಯಾಗಿ ನೀರು ಹರಿದು ಬರುತ್ತಿಲ್ಲ. ಹೀಗಾಗಿ ಕಾಲುವೆ ಕೊನೆ ಭಾಗದ ರೈತರಿಗೆ ನೀರು ದೊರೆಯದೆ ಬೆಳೆ ಬೆಳೆದುಕೊಳ್ಳಲು ತೊಂದರೆ ಅನುಭವಿಸುತ್ತಿದ್ದಾರೆ. ನೀರಿಗಾಗಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ.

ಏನು ಕಾರಣ: ಅಕ್ರಮ ನೀರು ಬಳಕೆದಾರರು ಹೆಚ್ಚಾಗಿರುವುದು, ಕಾಲುವೆ ನೀರು ನಿರ್ವಹಣೆ ಮಾಡದೇ ಇರುವುದರ ಪರಿಣಾಮ ಕೊನೆ ಭಾಗಕ್ಕೆ ನೀರು ಹರಿದು ಬರುತ್ತಿಲ್ಲ. ತಾಲ್ಲೂಕು ಆಡಳಿತದ ನಿರ್ಲಕ್ಷವೇ ಇದಕ್ಕೆಲ್ಲ ಕಾರಣ. ಸರ್ಕಾರ ನೀರು ನಿರ್ವಹಣೆಗಾಗಿ ಕೋಟ್ಯಂತರ ಖರ್ಚು ಮಾಡಿದರೂ ಸರಿಯಾಗಿ ನೀರು ಕೊಡದಿದ್ದರೆ ಕಾಲುವೆ ಇದ್ದರೂ ಉಪಯೋಗ ಇಲ್ಲದಂತಾಗಿದೆ ಎನ್ನುವುದು ರೈತರ ಆರೋಪವಾಗಿದೆ.

ನೀರಾವರಿ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಜಲಾಶಯದಿಂದ ನೀರು ಹರಿದರೂ ಕಾಲುವೆಗೆ ನೀರು ಬಾರದಿರುವುದರಿಂದಾಗಿ ಮತ್ತು ಮಳೆ ಕೊರತೆಯಿಂದಾಗಿ ನೀರಾವರಿ ಪ್ರದೇಶದ ರೈತರು ಸಹ ಬರ ಎದುರಿಸುವಂತಹ ಸ್ಥಿತಿ ಎದುರಾಗಿದೆ. ಒಂದೆಡೆ ಮಳೆಯಾಗಿ ಜಲಾಶಯ ಮತ್ತು ನದಿ ತುಂಬಿ ಹರಿಯುತ್ತಿದ್ದರೂ ಕಾಲುವೆ ಕೊನೆ ಭಾಗಕ್ಕೆ ನೀರು ಲಭ್ಯವಾಗದಿರುವುದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣವಾಗಿದೆ.

ಕಳೆದ 10 ವರ್ಷಗಳಿಂದ ಬಾಗೇವಾಡಿ ಕಾಲುವೆಯ ಕೊನೆ ಭಾಗದ ನೀರಾವರಿ ಜಮೀನುಗಳಿಗೆ ನೀರು ಬರುತ್ತಿಲ್ಲವೆಂದು, ಅನೇಕ ಬಾರಿ ರಸ್ತೆ ತಡೆದು ಪ್ರತಿಭಟನೆ, ಜಿಲ್ಲಾ, ತಾಲ್ಲೂಕು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುವುದು ತೆಕ್ಕಲಕೋಟೆ, ಬಲಕುಂದಿ, ಉಪ್ಪಾರಹೊಸಳ್ಳಿ ರೈತರ ಅಳಲು.

07-ಸಿರುಗುಪ್ಪ-02 : ಸಿರುಗುಪ್ಪ ತಾಲ್ಲೂಕಿನ ಬಾಗೇವಾಡಿ ಕಾಲುವೆಗೆ ಬೈರಾಪುರ ಗ್ರಾಮದ ಹತ್ತಿರ ಅಕ್ರಮವಾಗಿ ಅಳವಡಿಸಿದ ಪಂಪ್ ಸೇಟ್‍ಗಳು.
07-ಸಿರುಗುಪ್ಪ-02 : ಸಿರುಗುಪ್ಪ ತಾಲ್ಲೂಕಿನ ಬಾಗೇವಾಡಿ ಕಾಲುವೆಗೆ ಬೈರಾಪುರ ಗ್ರಾಮದ ಹತ್ತಿರ ಅಕ್ರಮವಾಗಿ ಅಳವಡಿಸಿದ ಪಂಪ್ ಸೇಟ್‍ಗಳು.
ತಾಲ್ಲೂಕಿನ ಶಾನವಾಸಪುರ ಗ್ರಾಮದಿಂದ ಬಾಗೇವಾಡಿ ಕೊನೆ ಭಾಗಕ್ಕೆ 35 ಕಿ.ಮೀ ಉದ್ದ ಕಾಲುವೆಯ ಮೂಲಕ ಮುಂಗಾರಿನಲ್ಲಿ 10 ಸಾವಿರ ಎಕರೆ ಪ್ರದೇಶಕ್ಕೆ 145 ಕ್ಯೂಸೆಕ್‌ ನೀರು ಹರಿಸಲಾಗುತ್ತದೆ
ತಿಪ್ಪೇಸ್ವಾಮಿ, ಜೆ.ಇ. ಬಾಗೇವಾಡಿ ಕಾಲುವೆ ನೀರಾವರಿ ಇಲಾಖೆ ಸಿರುಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT