ಸಿರುಗುಪ್ಪ: ಕಕ್ಷಿದಾರರು ವಿನಾಕಾರಣ ನ್ಯಾಯಾಲಯಕ್ಕೆ ಅಲೆಯುವುದನ್ನು ತಪ್ಪಿಸಲು ವಕೀಲರು ತಮ್ಮ ಕಕ್ಷಿದಾರರಿಗೆ ಮನವರಿಕೆ ಮಾಡಿ ಸೆ.13ರಂದು ನಡೆಯುವ ʼರಾಷ್ಟ್ರೀಯ ಲೋಕ ಅದಾಲತ್ʼ ಕಾರ್ಯಕ್ರಮದಲ್ಲಿ ರಾಜಿ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಸಿವಿಲ್ ನ್ಯಾಯಾಧೀಶ ಅಶೋಕ ಆರ್.ಎಚ್. ತಿಳಿಸಿದರು.

ನಗರದ ವಕೀಲರ ಸಂಘದ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮೀತಿ, ವಕೀಲರ ಸಂಘದಿMದ ಸೋಮವಾರ ನಡೆದ ಲೋಕಾದಾಲತ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ರಾಜಿಯಾಗಬಹುದಾದ ಕೌಟುಂಬಿಕ, ಜೀವನಾಂಶ, ಬ್ಯಾಂಕ್ ಸಾಲ, ಭೂ ವ್ಯಾಜ್ಯ, ಗಲಾಟೆ, ಚೆಕ್ ಬೌನ್ಸ್, ಪ್ರಕರಣಗಳು ಅಥವಾ ವಾಜ್ಯ ಪೂರ್ವ ಪ್ರಕರಣಗಳನ್ನು ಬಗೆ ಹರಿಸಿಕೊಳ್ಳಲು ಅವಕಾಧವಿದ್ದು, ಅಂತ ಪ್ರಕರಣಗಳಲ್ಲಿ ವಿನಾ ಕಾರಣ ನ್ಯಾಯಾಲಯಕ್ಕೆ ಅಲೆಯುವುದನ್ನು ತಪ್ಪಿಸಲು ಮತ್ತು ಸಮಯ ಹಣ ವ್ಯರ್ತವಾಗುವುದನ್ನು ತಪ್ಪಿಸಲು ರಾಜಿ ಸಂದಾನದ ಮೂಲಕ ಪ್ರಕರಣವನ್ನು ಇತ್ಯಾರ್ಥ ಗೊಳಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕಕ್ಷಿದಾರರು ಮುಂದಾಗಬೇಕೆಂದು ಕರೆ ನೀಡಿದರು.

ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಉಪ್ಪಾರ ವೇಂಕೂಬ, ಸರ್ಕಾರಿ ಸಹಾಯಕ ಅಭಿಯೋಜಕ ಶಿವುಕುಮಾರ್, ಉಪಾಧ್ಯಕ್ಷ ಎಂ.ಶರೀಫ್ ಸಾಬ್, ಕಾರ್ಯದರ್ಶಿ ಎಂ.ಶಿವಕುಮಾರ್ ಸ್ವಾಮಿ, ಜಂಟಿ ಕಾರ್ಯದರ್ಶಿ ಮಂಜುಳ ಹಾಗೂ ವಕೀಲರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.