ಹಾಂಗ್‌ಝೌ: ಭಾರತ ಮಹಿಳಾ ಫೆನ್ಸಿಂಗ್ ತಂಡದವರು ಈಪೀ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಹಾಗೂ ಪುರುಷರ ತಂಡದವರು ಫಾಯಿಲ್ ವಿಭಾಗದ 16ರ ಘಟ್ಟದಲ್ಲಿ ನಿರಾಸೆ ಅನುಭವಿಸಿದರು.
ತನಿಷ್ಕಾ ಖತ್ರಿ, ಜ್ಯೋತಿಕಾ ದತ್ತಾ ಮತ್ತು ಇನಾ ಅರೋರಾ ಅವರನ್ನೊಳಗೊಂಡ ಭಾರತ ಮಹಿಳಾ ತಂಡ 25–45 ರಿಂದ ಕೊರಿಯಾ ಕೈಯಲ್ಲಿ ಪರಾಭವಗೊಂಡಿತು. ಮಹಿಳೆಯರ ಪ್ರಿ ಕ್ವಾರ್ಟರ್‌ನಲ್ಲಿ 45–36 ರಿಂದ ಜೋರ್ಡಾನ್ ವಿರುದ್ಧ ಗೆದ್ದಿದ್ದರು.
ಸಿಂಗಪುರ ಫೆನ್ಸರ್‌ಗಳಿಗೆ ಸಾಟಿಯಾಗಲು ವಿಫಲವಾದ ಪುರುಷರ ತಂಡ 30–45 ರಿಂದ ಮಣಿಯಿತು.