ಘಟಿಕೋತ್ಸವದ ಎರಡೂವರೆ ಸಾವಿರದಷ್ಟು ಪ್ರಮಾಣ ಪತ್ರಗಳು ಅಕ್ರಮವಾಗಿರುವುದು ಗೊತ್ತಾಗಿದೆ. ಕನಿಷ್ಠ ₹70 ಲಕ್ಷದಷ್ಟು ವಂಚನೆ ಆಗಿರಬಹುದು.
– ಪ್ರೊ ಮುನಿರಾಜು, ಕುಲಪತಿ, ವಿಎಸ್‌ಕೆಯು, ಬಳ್ಳಾರಿ
ಏನಿದು ಹಗರಣ?
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಕುಲಪತಿ ಸಹಿ ನಕಲು ಮಾಡಿ ಸಾವಿರಾರು ಮಂದಿಗೆ ಘಟಿಕೋತ್ಸವದ ನಕಲಿ ಪ್ರಮಾಣ ಪತ್ರಗಳನ್ನು ಹಂಚಲಾಗಿದೆ ಎಂಬ ಆರೋಪ ವ್ಯಕ್ತವಾಗಿತ್ತು. ಇದರಲ್ಲಿ ವಿಶ್ವವಿದ್ಯಾಲಯದ ಉನ್ನತ ಹುದ್ದೆಯಲ್ಲಿದ್ದವರು, ಪರೀಕ್ಷಾಂಗ ವಿಭಾಗದ ಗುತ್ತಿಗೆ ನೌಕರರು ಭಾಗಿಯಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು. ಇದರ ತನಿಖೆಗೆ ತಂಡ ರಚಿಸಲಾಗಿತ್ತು. 10 ವರ್ಷಗಳ ಪ್ರಮಾಣ ಪತ್ರಗಳನ್ನು ಮತ್ತು ಅವುಗಳಿಗೆ ನೀಡಲಾಗಿದ್ದ ರಸೀದಿಗಳನ್ನು ತನಿಖಾ ತಂಡ ಜಾಲಾಡಿತ್ತು.