ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೆಲಿಕಾಂ ಎಂಜಿನಿಯರ್‌ ಈಗ ಪ್ರಗತಿಪರ ರೈತ

ಆದಾಯಕ್ಕೆ ವರದಾನವಾದ ಉದ್ಯೋಗ ಖಾತರಿ ಯೋಜನೆ
–ಲಕ್ಷ್ಮಣ ಎಚ್ ದೊಡ್ಡಮನಿ
Published : 13 ಸೆಪ್ಟೆಂಬರ್ 2024, 5:23 IST
Last Updated : 13 ಸೆಪ್ಟೆಂಬರ್ 2024, 5:23 IST
ಫಾಲೋ ಮಾಡಿ
Comments


ಡಂಬಳ: ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಷಯದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿ ಟೆಲಿಕಾಂ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಡಂಬಳಿ ಹೋಬಳಿಯ ಜಂತಲಿ ಶಿರೂರು ಗ್ರಾಮದ ವಿಜಯ ಶಿರುಂದ, ಇದ್ದಕ್ಕಿದ್ದಂತೆ ಕೃಷಿಯತ್ತ ಮುಖ ಮಾಡಿ ಆದಾಯವನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿ ಬಳಸಿಕೊಂಡಿದ್ದು ಅವರಿಗೆ ವರದಾನವಾಗಿ ಪರಿಣಮಿಸಿದೆ.

ಟೆಲಿಕಾಂ ಕಂಪನಿಯಲ್ಲಿ ಹೊರಗುತ್ತಿಗೆ ಉದ್ಯೋಗಿಯಾಗಿ ಮಾಸಿಕ ₹20 ಸಾವಿರ ವೇತನ ಪಡೆಯುತ್ತಿದ್ದರು. ಕೃಷಿಯಲ್ಲಿ ದಾಳಿಂಬೆ ಬೆಳೆದು 10 ಜನರಿಗೆ ಉದ್ಯೋಗ ನೀಡಿದ್ದಾರೆ.

2018-19ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ ₹71 ಸಾವಿರ ಸಹಾಯಧನ ಪಡೆದು ತಮ್ಮ ನಾಲ್ಕು ಜಮೀನಿನಲ್ಲಿ ದಾಳಿಂಬೆ ಬೆಳೆಯುವುದಕ್ಕಾಗಿ ಗುಜರಾತ್ ರಾಜ್ಯದಿಂದ 1300 ಸಸಿಗಳನ್ನು ತಂದು ನೆಟ್ಟರು. ಕೆಡ್ಲಾ ಕಂಪನಿಯ ಬಗವಾ ತಳಿಯ ದಾಳಿಂಬೆ ಸಸಿಗಳನ್ನು ತಲಾ ₹45ಕ್ಕೆ ಖರೀದಿಸಿದ್ದರು. ಸಸಿಗಳನ್ನು 8 ಅಡಿ ಸಾಲಿನಿಂದ ಸಾಲಿಗೆ 14 ಅಡಿ ಅಂತರವಿರುವಂತೆ ನೆಟ್ಟಿದ್ದರು. ಆರಂಭದಲ್ಲಿಯೇ ಕೃಷಿ ತಜ್ಞರ ಸಲಹೆ ಪಾಲನೆ ಮಾಡಿದ್ದರು.

ಮೂರು ವರ್ಷಕ್ಕೆ ದಾಳಿಂಬೆ ಫಸಲು ಆರಂಭವಾಗಿದ್ದು, ಮೊದಲೆರಡು ವರ್ಷ ಅವರು 50 ಟನ್‌ನಷ್ಟು ಫಸಲನ್ನು ಬೆಂಗಳೂರಿಗೆ ರಫ್ತು ಕಳಿಸಿದ್ದರು. ಆಗ ಒಂದು ಟನ್‌ಗೆ ಸರಾಸರಿ ಒಂದು ಲಕ್ಷ ಆದಾಯ ಸಿಕ್ಕಿತ್ತು.

‘ಈಗ ಮೂರನೇ ಫಸಲು ಕೈ ಸೇರುತ್ತಿದ್ದು, 45 ಟನ್ ಇಳುವರಿ ನಿರೀಕ್ಷೆ ಇದೆ. ದೀಪಾವಳಿ ಹೊತ್ತಿಗೆ ಮೂರನೇ ಕಟಾವು ಶುರುವಾಗಲಿದ್ದು ತೋಟಕ್ಕೆ ಬಂದು ಮಾರಾಟಗಾರರು ಕೊಂಡೊಯ್ಯಲಿದ್ದಾರೆ’ ಎಂದು ರೈತ ವಿಜಯ್ ಶಿರುಂದ ‘ಪ್ರಜಾವಾಣಿ‘ಗೆ ತಿಳಿಸಿದರು.

ಕಳೆದ ನಾಲ್ಕು ವರ್ಷಗಳಿಂದ 10 ರೈತರಿಗೆ ಮಾಸಿಕ ₹21 ಸಾವಿರ ವೇತನ ನೀಡಿ ಉದ್ಯೋಗ ಸೃಷ್ಟಿ ಮಾಡಿದ ಹಿರಿಮೆ ಸಹ ಅವರದು. ದಾಳಿಂಬೆಗೆ ರೋಗ ಬಾಧೆ ಹೆಚ್ಚು. ಅದನ್ನು ನಿಗ್ರಹಿಸುವಲ್ಲಿ ರೈತರಿಗೆ ಪರಿಶ್ರಮ ಅತ್ಯಗತ್ಯ. ಅದರಲ್ಲಿ ಯಶಸ್ವಿಯಾದರೆ ಉತ್ತಮ ಆದಾಯವನ್ನು ಖಂಡಿತ ನಿರೀಕ್ಷಿಸಬಹುದು ಎನ್ನುವುದು ಅವರ ಅನುಭವದ ಮಾತು.

‘2018-19ರಲ್ಲಿ ಟೆಲಿಕಾಂ ಗುತ್ತಿಗೆ ನೌಕರಿ ಬಿಟ್ಟಿದ್ದೆ. ಕೃಷಿಯಲ್ಲಿ ತೊಡಗಿಸಿಕೊಂಡಾಗ ನರೇಗಾ ಯೋಜನೆ ಕೈ ಹಿಡಿಯಿತು. ನಾನು ದುಡಿಯುತ್ತಿದ್ದಾಗ ನೀಡುತ್ತಿದ್ದಷ್ಟೇ ಪಗಾರವನ್ನು ನಾನೀಗ ನನ್ನ ಜಮೀನಿನ 10 ರೈತರಿಗೆ ನೀಡುತ್ತಿದ್ದೇನೆ. ದಾಳಿಂಬೆಗೆ ಪರಿಶ್ರಮ ಬೇಕು. ಪರಿಶ್ರಮ ಪಟ್ಟೇವು, ನರೇಗಾ ಯೋಜನೆ ಸಹಕಾರಿಯಾಯಿತು. ಹಾಗಾಗಿ ಈ ಫಲಿತಾಂಶ. ನೌಕರಿ ಬಿಟ್ಟು ರೈತನಾಗಿದ್ದಕ್ಕೆ ಹೆಮ್ಮೆಯಿದೆ’ ಎಂದರು.

ಡಂಬಳ ಹೋಬಳಿ  ಜಂತಲಿಶಿರೂರ ಗ್ರಾಮದ ರೈತ ಮಾಜಿ ಟೆಲಿಕಾಂ ಎಂಜನೀಯರ ವಿಜಯ ಶಿರುಂಧ  ನರೇಗಾ ಸಹಾಯಧನದಲ್ಲಿ ಉತ್ತಮವಾಗಿ ದಾಳಿಂಬಿ ಬೆಳೆದಿರುವ ಚಿತ್ರದೊಂದಿಗೆ. 
ಡಂಬಳ ಹೋಬಳಿ  ಜಂತಲಿಶಿರೂರ ಗ್ರಾಮದ ರೈತ ಮಾಜಿ ಟೆಲಿಕಾಂ ಎಂಜನೀಯರ ವಿಜಯ ಶಿರುಂಧ  ನರೇಗಾ ಸಹಾಯಧನದಲ್ಲಿ ಉತ್ತಮವಾಗಿ ದಾಳಿಂಬಿ ಬೆಳೆದಿರುವ ಚಿತ್ರದೊಂದಿಗೆ. 
ವಿಜಯ್ ಅವರು ನರೇಗಾ ಸದುಪಯೋಗದ ಜೊತೆಗೆ 10 ಜನರಿಗೆ ನಾಲ್ಕು ವರ್ಷಗಳಿಂದ ಉದ್ಯೋಗ ನೀಡಿರುವುದು ಖಂಡಿತ ಮಾದರಿ ಕೆಲಸ
ವಿಶ್ವನಾಥ ಹೊಸಮನಿ ಪಂಚಾಯತ ಇಓ ಮುಂಡರಗಿ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT