ಕೊಟ್ಟೂರು: ಪಟ್ಟಣದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಿವಿಧ ಕಳವು ಪ್ರಕರಣಗಳ ಆರೋಪಿಯನ್ನು ಶನಿವಾರ ಬಂಧಿಸಿದ ಪೊಲೀಸರು, ಒಟ್ಟು ₹2.65 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ಬೈರದೇವರಗುಡ್ಡ ಗ್ರಾಮದ ಎಚ್. ಹನುಮಂತಪ್ಪ ಬಂಧಿತ ಆರೋಪಿ.
ಕೂಡ್ಲಿಗಿ ಡಿವೈಎಸ್‌ಪಿ ಮಲ್ಲೇಶಪ್ಪ ಮಲ್ಲಾಪುರ ನೇತೃತ್ವದಲ್ಲಿ ಸಿಪಿಐ ವೆಂಕಟಸ್ವಾಮಿ, ಸಿಪಿಐ ವಿಕಾಸ್ ಲಮಾಣಿ ಹಗರಿಬೊಮ್ಮನಹಳ್ಳಿ, ಪಿಎಸ್ಐ ಗೀತಾಂಜಲಿ ಶಿಂಧೆ, ಸಿಬ್ಬಂದಿ ವೀರೇಶ್, ಬಸವರಾಜ್, ವೈ. ಶಶಿಧರ್, ರೇವಣಸಿದ್ಧಪ್ಪ, ಸಿ. ಕೊಟ್ರೇಶ್, ಚಿದಾನಂದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.