ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡ್ಲಿಗಿ | ಎರಡು ಮನೆಯಲ್ಲಿ ಕಳ್ಳತನ!

Published 15 ಮೇ 2024, 15:43 IST
Last Updated 15 ಮೇ 2024, 15:43 IST
ಅಕ್ಷರ ಗಾತ್ರ

ಕೂಡ್ಲಿಗಿ: ಕಳೆದ ನಾಲ್ಕು ದಿನಗಳಲ್ಲಿ ಪಟ್ಟಣದ ಚೋರನೂರು ರಸ್ತೆಯಲ್ಲಿ ಎರಡು ಮನೆಯಲ್ಲಿ ಸರಣಿ ಕಳ್ಳತನ ನಡೆದಿದ್ದು, ಜನರು ಭಯಭೀತರಾಗಿದ್ದಾರೆ.

ನಾಲ್ಕು ದಿನಗಳ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ ಹೈದರ್ ಎಂಬುವರ ಮನೆಗೆ ಹಾಕಿದ್ದ ಬೀಗವನ್ನು ಮುರಿದು ಬೀರುವಿನಲ್ಲಿ ಇದ್ದ 4 ತೊಲೆ ಬಂಗಾರ, 50 ಸಾವಿರ ನಗದು, 250 ಗ್ರಾಂ ಬೆಳ್ಳಿ, 6 ರೇಷ್ಮೆ ಸೀರೆ ಸೇರಿ ಸಿಸಿ ಕ್ಯಾಮಾರದ ಹಾರ್ಡ್ ಡಿಸ್‍ನ್ನು ಎತ್ತಿಕೊಂಡು ಹೋಗಿದ್ದಾರೆ. ಬೆಂಗಳೂರಿನಿಂದ ಭಾನುವಾರ ಬೆಳಿಗ್ಗೆ ಹೈದಾರ್ ಮನೆಗೆ ಬಂದಾಗ ಪ್ರಕರಣ ಬೆಳಿಕೆ ಬಂದಿದೆ.

ಇದರಂತೆ ಮಂಗಳವಾರ ನಿವೃತ್ತ ನೌಕರ ಸೋಮಶೇಖರ ಅವರು ಬೆಳಿಗ್ಗೆ ಹೊರಗಡೆ ಹೋದಾಗ ಮಧ್ಯಹ್ನದ ವೇಳೆ ಚಿಲಕ ಮುರಿದು 4 ತೊಲೆ ಬಂಗಾರ, 1 ಕೆಜಿ ಬೆಳ್ಳಿ, ₹ 10 ಸಾವಿರ ಕಳ್ಳತನ ಮಾಡಿದ್ದಾರೆ. ಎರಡು ಪ್ರಕರಣಗಳು ಪಟ್ಟಣದ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಪರಿಶೀಲಿಸಿದ್ದಾರೆ.

ಪಟ್ಟಣದಲ್ಲಿ ಹಾಡು ಹಗಲೇ ಕಳ್ಳತನ ನಡೆಯುತ್ತಿರುವುದು ಜನರಲ್ಲಿ ಭಯಭೀತಿ ಉಂಟು ಮಾಡಿದೆ. ರಾತ್ರಿ ವೇಳೆ ಪೊಲೀಸ್ ಗಸ್ತು ಹಾಕಬೇಕು. ಹಾಡು ಹಗಲೇ ಕಳ್ಳತನವಾಗುವುದನ್ನು ತಡೆಯಬೇಕು ಎಂದು ಜನರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT