ಸಂಡೂರು: ಪಟ್ಟಣದಲ್ಲಿ ಭಾನುವಾರ ಬಿಜೆಪಿ ತಾಲ್ಲೂಕು ಘಟಕ, ಸಾರ್ವಜನಿಕರಿಂದ ತಿರಂಗಯಾತ್ರೆ - ಭಾರತ ಸೇನೆಯೊಂದಿಗೆ ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಎಂಬ ಕಾರ್ಯಕ್ರಮದ ಅಂಗವಾಗಿ ಬೃಹತ್ ರಾಷ್ಟ್ರ ಧ್ವಜ, ಬ್ಯಾನರ್ ದೊಂದಿಗೆ ಸಂಭ್ರಮದಿಂದ ಮೆರವಣಿಗೆ ನಡೆಸಿ ಸೈನಿಕರಿಗೆ ಕೃತಜ್ಞತೆ ಸಲ್ಲಿಸಿದರು.

ವೀರಕ್ತ ಮಠದ ಪ್ರಭುನಿರಂಜನ ಸ್ವಾಮಿಗಳು, ಭುಜಂಗನಗರ ಗ್ರಾಮದ ಮಠದ ಎರ್ರಿಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮೆರವಣಿಗೆಯು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ಆವರಣದಿಂದ ಆರಂಭವಾಗಿ ಕೆಇಬಿ ವೃತ್ತ, ಮರಾಠ ಸಮಾಜ, ವಾಲ್ಮೀಕಿ ವೃತ್ತದ ಮೂಲಕ ವಿಜಯ ವೃತ್ತದವರೆಗೂ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಪಟ್ಟಣದ ಸಾರ್ವಜನಿಕರು, ಯುವಕರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಭಾರತ ಮಾತಾ ಕೀ ಜೈ, ವಂದೇ ಮಾತಾರಂ, ಜೈ ಹಿಂದ್ ಘೋಷಣೆಗಳ ಮೊಳಗಿಸುವ ಮೂಲಕ ದೇಶದ ವೀರ ಸೈನಿಕರಿಗೆ ನಮನ ಅರ್ಪಿಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ದಿವಾಕರ, ತಾಲ್ಲೂಕು ಮಂಡಲದ ಅಧ್ಯಕ್ಷ ನಾನಾಸಾಹೇಬ್ ನಿಕ್ಕಂ, ಉಪಾಧ್ಯಕ್ಷ ಮಂಜುನಾಥ, ಪ್ರಭುಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯು.ಸುರೇಶ್, ಮಂಡಲದ ಕಾರ್ಯದರ್ಶಿ ದರೋಜಿ ರಮೇಶ್, ಮುಖಂಡರಶದ ಪುಷ್ಪಾ, ಮಂಜುಳಾ, ನರೇಂದ್ರ ಪಾಟೀಲ್, ನರಸಿಂಹ, ಕರಡಿ ಎರ್ರಿಸ್ವಾಮಿ, ರಘುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.