ಗಾಂಧಿ ವೃತ್ತದಿಂದ ಉಜ್ಜಯಿನಿ ವೃತ್ತದವರೆಗೂ ಸರಕು ಸಾಮಗ್ರಿಗಳನ್ನು ಹೊತ್ತು ತಂದ ಲಾರಿಗಳು ಅಂಗಡಿಗಳ ಮುಂದೆ ಗಂಟೆಗಟ್ಟಲೆ ಸರಕು ಇಳಿಸುವ ಕಾರ್ಯದಲ್ಲಿ ತೊಡಗುವುದರಿಂದ ಕಿರಿದಾದ ರಸ್ತೆಯಲ್ಲಿ ಎದುರಿಗೆ ಬರುವ ವಾಹನಗಳು ಮುಂದೆ ಹೋಗಲು ಸಾಧ್ಯವಾಗದ ಪರಿಸ್ತಿತಿ ಇದೆ. ಇದರ ಮಧ್ಯೆ ಬಿಡಾಡಿ ದಮಕರುಗಳ ಹಾವಳಿ ಒಂದೆಡೆಯಾದರೆ ದ್ವಿಚಕ್ರ ವಾಹನ ಸವಾರರು ತಮಗೆ ಇಚ್ಛೆ ಬಂದಲ್ಲಿ ನಿಲ್ಲಿಸುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ.