ಬಳ್ಳಾರಿ: ‘ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಪ್ಪಿಸಲು, ಪಾರದರ್ಶಕತೆ ಕಾಯ್ದುಗೊಳ್ಳಲು ಕೇಂದ್ರ ಸರ್ಕಾರವು, ‘ಮನರೇಗಾ’ ಬದಲಿಗೆ `ವಿ ಜಿ-ರಾಮ್ ಜಿ’ ಜಾರಿಗೆ ತಂದಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಉದ್ಯೋಗ ಖಾತ್ರಿ ಯೋಜನೆಯನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಕ್ರಮ ಕೈಗೊಂಡಿದೆ. ಕೆಲಸದ ದಿನಗಳನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ಕೂಲಿ ಹಣವನ್ನೂ ಏರಿಸಲಾಗಿದೆ. ಈಗ ಎಲ್ಲವನ್ನೂ ಪಾರದರ್ಶಕವಾಗಿ ಮಾಡಲಾಗಿದೆ. ಆದಷ್ಟು ಬೇಗನೆ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದರು.

‘ಕಾಯ್ದೆ ಬದಲಿಸುವ ವೇಳೆ ಗಾಂಧೀಜಿ ಹೆಸರನ್ನು ಕಡೆಗಣಿಸಿಲ್ಲ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ‘ಮನರೇಗಾ’ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ. ಯೋಜನೆ ದುರ್ಬಳಕೆ ಆಗಿದೆ. ಈಗಿನ ಕಾಂಗ್ರೆಸ್ನವರಿಗೆ ಮಹಾತ್ಮಾಗಾಂಧಿ ಹೆಸರನ್ನು ಹೇಳುವ ನೈತಿಕತೆಯೂ ಇಲ್ಲ. ಇವರೆಲ್ಲ ನಕಲಿ ಗಾಂಧಿಗಳು’ ಎಂದರು.

‘ದೇಶದ ಜನರು ಕಾಂಗ್ರೆಸ್ ಪಕ್ಷವನ್ನು ಬಹಳಷ್ಟು ರಾಜ್ಯಗಳಲ್ಲಿ ತಿರಸ್ಕರಿಸಿದ್ದಾರೆ. ರಾಷ್ಟ್ರದ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಆಡಳಿತವಿದೆ. ಮುಂದಿನ ಚುನಾವಣೆಗಳಲ್ಲಿ, ಈ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಸೋಲಲಿದೆ. ಕರ್ನಾಟಕದಲ್ಲಿಯೂ ಜನತೆ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಶ್ರೀರಾಮುಲು ತಿಳಿಸಿದರು.

‘ಹುಬ್ಬಳ್ಳಿ’ಯಲ್ಲಿ ಬಿಜೆಪಿ ಕಾರ್ಯಕರ್ತೆಯೊಬ್ಬರಿಗೆ ಪೊಲೀಸರು ಅಪಮಾನ ಮಾಡಿದ್ದಾರೆ. ಮಹಿಳೆಗೆ ಅಗೌರವ ತೋರುವುದು ಯಾರಿಗೂ ಶೋಭೆ ತರುವುದಿಲ್ಲ. ಮಹಿಳೆಯರಿಗೆ ಯಾರೇ ಅಪಮಾನ ಮಾಡಿದರೂ ಸಮರ್ಥನೀಯವಲ್ಲ’ ಎಂದು ಹೇಳಿದರು.

ಮಾಜಿ ಶಾಸಕ ಸೋಮಶೇಖರರೆಡ್ಡಿ, ಟಿ.ಹೆಚ್.ಸುರೇಶ್ಬಾಬು ಇದ್ದರು.