ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ವರ್ಷದಿಂದ ಬಾಕಿ ಉಳಿದಿದ್ದ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಪ್ರಾಧ್ಯಾಪಕರ ಬಡ್ತಿ ಪ್ರಕ್ರಿಯೆ ಕೊನೆಗೂ ಆರಂಭವಾಗಿದೆ. ಆದರೆ, ವಿವಿಯ ನಾಲ್ವರ ಪದೋನ್ನತಿಗೆ ಆಕ್ಷೇಪ ವ್ಯಕ್ತವಾಗಿದೆ.

ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಹಲವು ಹಗರಣಗಳು ಬಯಲಾಗಿದ್ದವು. ಈ ಹಗರಣಗಳು ಮತ್ತು ಇತರ ಆರೋಪಗಳಿಗೆ ಒಳಗಾಗಿರುವ ನಾಲ್ವರನ್ನು ಬಡ್ತಿ ಪ್ರಕ್ರಿಯೆಯಿಂದಲೇ ಹೊರಗಿಟ್ಟು, ಉಳಿದವರ ಬಡ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸಿಂಡಿಕೇಟ್ ಮಾಜಿ ಸದಸ್ಯ ಮರ್ಚಡ್ ಮಲ್ಲಿಕಾರ್ಜುನ ಗೌಡ ಅವರು ಕುಲಪತಿ ಮತ್ತು ಕುಲಸಚಿವರಿಗೆ ಇತ್ತೀಚೆಗೆ ಪತ್ರ ಬರೆದಿದ್ದಾರೆ. ಈ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ವಿಶ್ವವಿದ್ಯಾಲಯದ ಹಲವು ಜನರು ಮತ್ತು ಪ್ರಕರಣಗಳ ತನಿಖೆಗೆ ನಿವೃತ್ತ ನ್ಯಾಯಾಧೀಶರು ಮತ್ತು ಸಿಂಡಿಕೇಟ್ ಸದಸ್ಯರ ನೇತೃತ್ವದ ಸಮಿತಿ ರಚಿಸಿದೆ. ಈ ತನಿಖೆ ಪೂರ್ಣಗೊಂಡು, ಅಂತಿಮ ವರದಿ ನೀಡುವವರೆಗೆ ಹಾಗೂ ಆರೋಪಿತರು ನಿರಪರಾಧಿ ಎಂದು ಸಾಬೀತಾಗುವವರೆಗೆ ಬಡ್ತಿ ಸಂದರ್ಶನ ನಡೆಸಬಾರದು’ ಎಂದು ಅವರು ಆಗ್ರಹಿಸಿದ್ದಾರೆ.

‘ನಿರ್ವಹಣಾ ವಿಭಾಗದ ಕೆ.ಸಿ. ಪ್ರಶಾಂತ್, ₹1.07 ಕೋಟಿ ಮೊತ್ತದ ಇಎಸ್ಐ, ಇಪಿಎಫ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅವರ ವಿರುದ್ಧ ಸಿಂಡಿಕೇಟ್ ಸದಸ್ಯರ ನೇತೃತ್ವದ ತನಿಖಾ ತಂಡ 2022ರಲ್ಲಿ ವರದಿ ಸಲ್ಲಿಸಿದೆ. ಹಣ ವಸೂಲಿ ಮತ್ತು ಶಿಸ್ತುಕ್ರಮಕ್ಕೆ ಸಿಂಡಿಕೇಟ್ ಒಪ್ಪಿಗೆಯನ್ನೂ ನೀಡಿದೆ. ಈ ಕುರಿತು ಹೊರಗುತ್ತಿಗೆ ನೌಕರರು ದೂರು ದಾಖಲಿಸಿದ್ದಾರೆ. 2019ರ ಕೇಂದ್ರ ವೇತನ ಆಯೋಗದ ನಿಯಮಗಳಂತೆ 2019ರ ಮೇ ತಿಂಗಳಲ್ಲಿ ನೇಮಕವಾದ ಪ್ರಶಾಂತ್, 2010ರ 6ನೇ ವೇತನ ಆಯೋಗದ ನಿಯಮಗಳ ಆಧಾರದಲ್ಲಿ ಬಡ್ತಿ ಬಯಸಿದ್ದಾರೆ. ಇದಕ್ಕೆ ಅವಕಾಶವಿಲ್ಲ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ಇತಿಹಾಸ ವಿಭಾಗದ ಅನಂತ್ ಎಲ್. ಝಂಡೆಕರ್ ಅವರು ಮೈಸೂರು ವಿಶ್ವವಿದ್ಯಾಲಯದ ಹಲವು ಅಕ್ರಮಗಳಲ್ಲಿ ಭಾಗಿಯಾದ ಆರೋಪವಿದ್ದು, ಅಲ್ಲಿ ಅವರು ವಜಾಗೊಂಡಿದ್ದಾರೆ. ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ನೇಮಕಾತಿ ವೇಳೆ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿ ಆಯ್ಕೆಯಾದ ಆರೋಪವಿದೆ. ಹಂಗಾಮಿ ಕುಲಪತಿಯಾಗಿದ್ದ ವೇಳೆ ಅವರು ಅಧಿಕಾರ ದುರುಪಯೋಗ ಮಾಡಿಕೊಂಡ, ಹಲವರನ್ನು ಬೆದರಿಸಿದ ಆರೋಪವೂ ಕೇಳಿಬಂದಿದೆ. ಅವರ ವಿರುದ್ಧವೂ ತನಿಖೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

‘ಬಹುಕೋಟಿ ಮೊತ್ತದ ಘಟಿಕೋತ್ಸವ ಪ್ರಮಾಣಪತ್ರ ಹಗರಣದಲ್ಲಿ ಸಾಹೇಬ್ ಅಲಿ, ರಮೇಶ್ ಓಲೇಕರ್ ಅವರ ಹೆಸರುಗಳೂ ಕೇಳಿಬಂದಿದ್ದು, ಈಗಾಗಲೇ ತನಿಖೆ ನಡೆಯುತ್ತಿದೆ’ ಎಂದಿದ್ದಾರೆ.

ಈ ಕುರಿತು ಕುಲಪತಿ ಪ್ರತಿಕ್ರಿಯೆ ಪಡೆಯಲು ಎರಡು ದಿನ ಪ್ರಯತ್ನಿಸಲಾಯಿತು. ಆದರೆ, ಅವರ ಸಂಪರ್ಕ ಸಾಧ್ಯವಾಗಲಿಲ್ಲ. ಸಂದೇಶಕ್ಕೆ ಉತ್ತರಿಸಲೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.