ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಬ್ರಿಗೇಡ್‌ನಿಂದ ವೀರಾಕ್ಷತೆ ಸಂಗ್ರಹ

Published 26 ಜುಲೈ 2023, 14:08 IST
Last Updated 26 ಜುಲೈ 2023, 14:08 IST
ಅಕ್ಷರ ಗಾತ್ರ

ಕಾನಹೊಸಹಳ್ಳಿ: ಸಮೀಪದ ಹಿರೇಕುಂಬಳಗುಂಟೆ ಗ್ರಾಮದಲ್ಲಿ ಬುಧವಾರ ಕಾರ್ಗಿಲ್ ವಿಜಯ ದಿನದ ಅಂಗವಾಗಿ ಯೋಧ ಸದಾನಂದ್ ಅವರ ತಾಯಿಯಿಂದ ಯುವ ಬ್ರಿಗೇಡ್ ತಂಡದವರು ವೀರಾಕ್ಷತೆ ಪಡೆದರು.

ಯುವ ಬ್ರಿಗೇಡ್‌ನ ನಾಗರಾಜ್ ಗೌಡ ಮಾತನಾಡಿ, ‘ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಆಗಸ್ಟ್‌ 13, 14, 15ರಂದು ಯುವ ಬ್ರಿಗೇಡ್ ವತಿಯಿಂದ ಬೆಂಗಳೂರಿನ ವಿಭೂತಿಪುರದಲ್ಲಿ ಸ್ವಾತಂತ್ರ್ಯ ಶ್ರಾವಣ ಕಾರ್ಯಕ್ರಮದಲ್ಲಿ ನಡೆಯಲಿದೆ. ರಾಜ್ಯದಾದ್ಯಂತ ಯೋಧರ ತಾಯಿಯಿಂದ ಹಾಗೂ ಯೋಧರ ಮನೆಯಿಂದ ಅಕ್ಷತೆ ಪಡೆದು, ಭಾರತಂಬೆ ಚಿತ್ರಕ್ಕೆ ಅರ್ಪಿಸಲಾಗುವುದು’ ಎಂದರು.

‘ಯೋಧನನ್ನು ಸಾಕಿ, ಸಲುಹಿ ದೇಶ ಸೇವೆಗೆ ಸಮರ್ಪಿಸಿರುವ, ತಾಯಿಯೂ ಭಾರತ ಮಾತೆ ಇದ್ದಂತೆ. ಅವರ ಶ್ರೀರಕ್ಷೆ ದೇಶದ  ಮೇಲಿರಲ್ಲಿದೆ. ಈ ನಿಟ್ಟಿನಲ್ಲಿ ವೀರಾಕ್ಷತೆ ಪಡೆಯಲಾಗಿದೆ’ ಎಂದರು.

ಯೋಧ ಸದಾನಂದ್, ಯುವ ಬ್ರಿಗೇಡ್‌ನ ಕೊಟ್ರೇಶ್ ತುಮ್ಮಿನಕಟ್ಟೆ, ಕೆ.ಎಸ್‌. ವಿನೋದ್ ಕುಮಾರ್, ಹುಲಿಕೇರೆ ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT