ಬೆಂಗಳೂರು: ರಾಜ್ಯದ ವಿವಿಧ ಭಾಗಗಳಿಂದ ಕೆಲಸಕ್ಕಾಗಿ ಬಂದು ಊಟವಿಲ್ಲದೇ ಪರಿತಪಿಸುವರು, ಬಸ್ ನಿಲ್ದಾಣ ಮತ್ತಿತರ ಕಡೆಗಳಲ್ಲಿರುವ ನಿರಾಶ್ರಿತರಿಗೆ ಜಯನಗರದ ಬಾಂಧವ ಸ್ವಯಂ ಸೇವಾ ಸಂಸ್ಥೆ 21 ದಿನಗಳ ದಿಗ್ಬಂಧನ ಮುಗಿಯುವವರೆಗೂ ಉಚಿತ ಊಟ ವಿತರಿಸಲು ತೀರ್ಮಾನಿಸಿದೆ.

ಮಾರ್ಚ್ 30ರಿಂದ ಜಯನಗರದ ಜನರಲ್ ಆಸ್ಪತ್ರೆಯ ರೋಗಿಗಳು ಮತ್ತವರ ಕುಟುಂಬ ಸದಸ್ಯರು, ಜಯನಗರ ಶಾಪಿಂಗ್ ಮಾಲ್ ಕಾರ್ಮಿಕರಿಗೆ ಪ್ರತಿದಿನ ಮಧ್ಯಾಹ್ನ 12ರಿಂದ ಎರಡು ಗಂಟೆವರೆಗೆ ಊಟದ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿದ ಬಾಂಧವ ತಂಡದ ಮುಖ್ಯಸ್ಥ, ಪಾಲಿಕೆ ಸದಸ್ಯ ಎನ್. ನಾಗರಾಜು, ‘ಕೊರೊನಾ ವೈರಾಣುವಿನಿಂದ ಇಡೀ ಭಾರತ ಬಂದ್ ಆಗಿದ್ದು ಜಯನಗರದ ಬೈರಸಂದ್ರ ಹಾಗೂ ಸುತ್ತಮುತ್ತಲಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸುಮಾರು 30 ರಿಂದ 40 ದಿನ ಉಚಿತ ಊಟ ವಿತರಣೆ ಮಾಡಲಾಗುವುದು. ಅತ್ಯಂತ ರುಚಿ, ಶುಚಿಯಾದ ಆಹಾರವನ್ನು ಕಂಟೈನರ್ ಮೂಲಕ ಪೂರೈಸಲಾಗುವುದು. ದಿನನಿತ್ಯ ಒಂದೊಂದು ಬಗೆಯ ಆಹಾರ ವಿತರಿಸಲು ತೀರ್ಮಾನಿಸಲಾಗಿದೆ’ ಎಂದರು.

ಸುಮಾರು 200 ಮಂದಿ ಸ್ವಯಂ ಸೇವಕರು ಪ್ರತ್ಯೇಕ ವಾಹನಗಳಲ್ಲಿ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಜನರಿಗೆ ಊಟ ಪ್ಯಾಕೆಟ್ ವಿತರಣೆ ಮಾಡಲಿದ್ದಾರೆ.

ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ನೇತೃತ್ವದಲ್ಲಿ ಕಡು ಬಡವರು ಹಾಗೂ ಕಾರ್ಮಿಕರು, ದಿನಗೂಲಿ ಕೆಲಸಗಾರರು ಹಾಗೂ ಪೌರಕಾರ್ಮಿಕರಿಗೆ, ಬಿಪಿಎಲ್ ಕಾರ್ಡ್ ಇಲ್ಲದವರಿಗೆ ದಿನಬಳಕೆ ವಸ್ತುಗಳು ಹಾಗೂ ರೇಷನ್ ಕಿಟ್ ವಿತರಣೆ ಮಾಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.