ಸೋಮವಾರ, ಜುಲೈ 26, 2021
22 °C

ಕೋವಿಡ್- 19 | 40 ಮಂದಿಯ ವರದಿ ಪಾಸಿಟಿವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಒಂದೇ ದಿನ 40 ಮಂದಿಗೆ ಕೋವಿಡ್‌-19 ದೃಢ ಪಟ್ಟಿರುವ ಸುದ್ದಿ ಬಹಿರಂಗವಾಗುತ್ತಿದ್ದಂತೆ ಜನರು ಆತಂಕಗೊಂಡಿದ್ದು, ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ.  

ಈ ಹಿಂದೆ ಒಂದೇ ದಿನ ಹತ್ತು ಜನರಲ್ಲಿ ಸೋಂಕು ದೃಢಪಟ್ಟಿತ್ತು. ಈ ಸಂಖ್ಯೆಯೇ ಹೆಚ್ಚು ಎಂದು ಜನ ಭಾವಿಸಿದ್ದರು. ಆದರೆ, ಗುರುವಾರ ಒಂದೇ ದಿನ 40 ಮಂದಿಯ ಪರೀಕ್ಷಾ ವರದಿ ಪಾಸಿಟಿವ್‌ ಆಗಿದೆ. 

ವರದಿ ಬರುತ್ತಿದ್ದಂತೆ ನಗರದಲ್ಲಿ ಲಾಕ್‌ಡೌನ್‌ ಅನ್ನು ಪೊಲೀಸರು ಬಿಗಿಗೊಳಿಸಿದರು. ನಗರದೊಳಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳಿಗೆ ಬ್ಯಾರಿಕೇಡ್‌ಗಳನ್ನು ಅಡ್ಡಲಾಗಿಟ್ಟು, ಅನವಶ್ಯಕವಾಗಿ ತಿರುಗಾಡುತ್ತಿದ್ದವರಿಗೆ ಲಾಠಿ ರುಚಿ ತೋರಿಸಿದರು. ಕೆಲವರಿಗೆ ಎಚ್ಚರಿಸಿ ಕಳುಹಿಸಿದರು. 

ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳಿಗ್ಗೆ ನಿತ್ಯದಂತೆ ಹಣ್ಣು, ತರಕಾರಿ ವಹಿವಾಟು ನಡೆಯಿತಾದರೂ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. ಲಾಕ್‌ಡೌನ್‌ ಇದ್ದರೂ ಸಹ ಬೆಳಿಗ್ಗೆ 12 ಗಂಟೆವರೆಗೂ ಅಗತ್ಯ ದಿನ ಬಳಕೆ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು.

ನಗರದ ದೇಶದಪೇಟೆಯಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಕೋವಿಡ್‌ ದೃಢಪಟ್ಟಿದೆ. ಗುರುವಾರ ಸೋಂಕು ದೃಢ ಪಟ್ಟಿರುವವರಲ್ಲಿ ರೈಲ್ವೆ ನಿಲ್ದಾಣ ಸಮೀಪದ ಬಡಾವಣೆಯಲ್ಲಿ 2 ವರ್ಷದ ಮಗುವು ಸಹ ಸೇರಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು