ಶುಕ್ರವಾರ, ಜನವರಿ 24, 2020
17 °C

ನೆಲಮಂಗಲ ಸಮೀಪ ಸರಣಿ ಅಪಘಾತ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ರಾಯರಪಾಳ್ಯದ ಬಳಿ ಸರಣಿ ಅಪಘಾತ ನಡೆದಿದೆ.

ತುಮಕೂರಿನ ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಅವರ ಸಂಬಂಧಿಕರಿಗೂ ಈ ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗಳಾಗಿವೆ.

ಕೆಎಸ್‌ಆರ್‌ಟಿಸಿ ಬಸ್, ಇನೋವಾ ಕಾರು ಮತ್ತು ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿದೆ. ಯಾವುದೇ ಪ್ರಾಣಾಪಾಯ ಆಗಿಲ್ಲ. 

ಸ್ಥಳದಿಂದ ಕಾರು ತೆಗೆದುಕೊಂಡು ಕಾರು ಚಾಲಕ ಪರಾರಿ ಆಗಿದ್ದಾನೆ. ಅಪಘಾತದ ಪರಿಣಾಮ ಕೆಲ ಹೊತ್ತು ರಾಷ್ಟ್ರೀಯ ಹೆದ್ದಾರಿ 4ರಲ್ಲಿ‌ ಸಂಚಾರ ದಟ್ಟಣೆ ಉಂಟಾಗಿತ್ತು.‌

ನೆಲಮಂಗಲ ಸಂಚಾರಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು