ಭಾನುವಾರ, ಏಪ್ರಿಲ್ 11, 2021
27 °C

ಗುಣಮಟ್ಟದ ಹಾಲು ಪೂರೈಕೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಗುಣಮಟ್ಟದ ಹಾಲಿನಿಂದ ಡೇರಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹಳಿಯೂರು ಡೇರಿಯ ನೂತನ ಅಧ್ಯಕ್ಷ ರಘುಪತಿ ಹೇಳಿದರು.

ಹೋಬಳಿಯ ಹಳಿಯೂರು ಡೇರಿಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ನಂತರ ಅವರು ಮಾತನಾಡಿದರು.

ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದಿರುವ ಕಾರಣ ರೈತಾಪಿ ವರ್ಗದವರು ಕೃಷಿ, ತೋಟಗಾರಿಕೆ, ರೇಷ್ಮೆ ಉದ್ಯಮವನ್ನು ಬಿಟ್ಟು ಹೈನುಗಾರಿಕೆಯನ್ನೇ ಅವಲಂಬಿಸಿದ್ದಾರೆ. ಇದರಿಂದ ಕುಟುಂಬಗಳ ನಿರ್ವಹಣೆ ಮೇಲೆ ಅಷ್ಟೊಂದು ಹೊಡೆತ ಬಿದ್ದಿಲ್ಲ ಎಂದರು.

ಹೈನುಗಾರಿಕೆ ಇಲ್ಲದಿದ್ದರೆ ಈ ಭಾಗದ ರೈತರು ಬೀದಿಗೆ ಬರಬೇಕಾಗಿತ್ತು. ರೈತರು ಉತ್ಪಾದನೆ ಮಾಡುತ್ತಿರುವ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುವಂತೆ ಮಾಡಬೇಕಾಗಿದೆ. ನಾವೂ ಕೂಡ ನಂದಿನಿ ಉತ್ಪನ್ನಗಳನ್ನು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಡೇರಿ ಉಪಾಧ್ಯಕ್ಷೆ ಆನಂದಮ್ಮ, ನಿರ್ದೇಶಕರಾದ ಚನ್ನಕೃಷ್ಣ, ವೆಂಕಟಾಚಲ, ಶಿವಕುಮಾರ್, ಕೇಶವ, ನಾಗೇಶ್, ನವೀನ್, ಪ್ರತಾಪ್, ಗೌರಮ್ಮ, ನಾರಾಯಣಪ್ಪ, ಮಂಜು, ಮುನಿಶಾಮಪ್ಪ ಮುಖ್ಯ ಕಾರ್ಯನಿರ್ವಾಹಕ ವೀರಾಂಜನೇಯ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.