ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತಕುಮಾರ ಹೆಗಡೆ ಗಡಿಪಾರು ಮಾಡಿ

Published 14 ಮಾರ್ಚ್ 2024, 6:11 IST
Last Updated 14 ಮಾರ್ಚ್ 2024, 6:11 IST
ಅಕ್ಷರ ಗಾತ್ರ

ಹೊಸಕೋಟೆ: ದೇಶದ ವೈವಿಧ್ಯತೆಯನ್ನು ಉಳಿಸುತ್ತಾ, ಸರ್ವರೂ ನೆಮ್ಮದಿಯಿಂದ ಜೀವಿಸುವ ವಾತಾವರಣ ನಿರ್ಮಾಣ ಮಾಡಿರುವ ಸಂವಿಧಾನವನ್ನು ಬದಲಾಯಿಸುವ ಮಾತನ್ನು ಆಡುತ್ತಿರುವ ಬಿಜೆಪಿಯ ಅನಂತಕುಮಾರ ಹೆಗಡೆಯನ್ನು ಈ ಕೂಡಲೆ ಗಡಿಪಾರು ಮಾಡಬೇಕು ಎಂದು ದಸಂಸ ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ಒತ್ತಾಯಿಸಿದರು.

ಮಾಧ್ಯಮದೊಂದಿಗೆ ಮಾತನಾಡಿ, ಪದೇ ಪದೇ ಸಂವಿಧಾನದ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಅನಂತಕುಮಾರ ಹೆಗಡೆಯನ್ನು ಬಿಜೆಪಿ ನಾಯಕರು ತಿಳಿದೂ ತಿಳಿಯದಂತೆ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅದರರ್ಥ ಸಂವಿಧಾನ ಬದಲಾವಣೆ ಬಿಜೆಪಿಯ ಪ್ರಮುಖ ಅಜೆಂಡಾಗಳಲ್ಲಿ ಒಂದು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಸಂವಿಧಾನದ ಕುರಿತು ಈ ರೀತಿ ಮಾತನಾಡಲು ಸಿದ್ಧಗೊಳಿಸಿ ಕಳುಹಿಸಿದಂತಿದೆ ಎಂದರು.

ದೇಶದ ಜೀವನಾಡಿ ಸಂವಿಧಾನದ ಕುರಿತು ಹೆಗಡೆ ಕೆಟ್ಟದಾಗಿ ಮಾತನಾಡುತ್ತಿದ್ದರು ಬಿಜೆಪಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT