ಆನೇಕಲ್: ತಾಲ್ಲೂಕು ವಕೀಲರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವೈ.ಪ್ರಕಾಶ್ ಪಟಾಪಟ್ ಅವರು ಚುನಾಯಿತಾದರು. ಉಪಾಧ್ಯಕ್ಷರಾಗಿ ಆರ್.ಹರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ರವೀಶ್ ಕುಮಾರ್, ಖಜಾಂಚಿಯಾಗಿ ಶಾರದಮಣಿ ಆಯ್ಕೆಯಾದರು.

ತಾಲ್ಲೂಕು ವಕೀಲರ ಸಂಘದ ಚುನಾವಣೆಯಲ್ಲಿ 14 ಮಂದಿ ಅಭ್ಯರ್ಥಿಗಳು ಆಡಳಿತ ಮಂಡಳಿಗೆ ಚುನಾಯಿತರಾಗಿದ್ದಾರೆ. ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವೈ.ಪ್ರಕಾಶ್ ಪಟಾಪಟ್ ಅವರು 336 ಮತ ಪಡೆದು ಅಧ್ಯಕ್ಷರಾದರು. ಇವರ ಪ್ರತಿಸ್ಪರ್ಧಿ ಎಂ.ಆರ್.ವೇಣುಗೋಪಾಲ್ ಅವರು 305 ಮತ ಪಡೆದು ಪರಾಭವಗೊಂಡರು.

ಉಪಾಧ್ಯಕ್ಷ ಸ್ಥಾನಕ್ಕೆ 347 ಮತ ಪಡೆದು ಹರೀಶ್ ಕುಮಾರ್ ಚುನಾಯಿತರಾದರು. ಇವರ ಪ್ರತಿಸ್ಪರ್ಧಿ ಶಿವರಾಜು 288 ಮತ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರವೀಶ್ ಕುಮಾರ್ ಅವರು 318 ಮತ ಪಡೆದು ಚುನಾಯಿತರಾದರು. ಇವರ ಪ್ರತಿಸ್ಪರ್ಧಿ ಬಾಲರೆಡ್ಡಿ ಅವರಿಗೆ 317 ಮತ. ಖಜಾಂಚಿ ಸ್ಥಾನದ ಸ್ಪರ್ಧಿ ಶಾರದ ಮಣಿ ಅವರು 332 ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ. ಇವರ ಪ್ರತಿಸ್ಪರ್ಧಿ ಗೌರಮ್ಮ 300 ಮತ ಪಡೆದಿದ್ದಾರೆ.

ಆಡಳಿತ ಮಂಡಳಿಯ ಮೂವರು ಮಹಿಳಾ ಮೀಸಲು ಮತ್ತು 11 ಮಂದಿ ಸಾಮಾನ್ಯ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಮಹಿಳಾ ಕ್ಷೇತ್ರದಿಂದ 410 ಮತ ಪಡೆದು ನಿರ್ಮಲಾ, 407 ಮತ ಪಡೆದು ನಾಗರತ್ನ, 330 ಮತ ಪಡೆದು ನೀಲಮ್ಮ ಅವರು ಚುನಾಯಿತರಾದರು.

415 ಮತ ಪಡೆಯುವ ಮೂಲಕ ಮೋಹನ್ ಕಾಂತ ಅವರು ಮೊದಲನೇ ಸ್ಥಾನ ಪಡೆದು ಆಡಳಿತ ಮಂಡಳಿಗೆ ಚುನಾಯಿತರಾಗಿದ್ದಾರೆ. ಮೋಹನ್ 420, ನಾರಾಯಣಸ್ವಾಮಿ 370, ನಾಗರಾಜು 368, ಸತೀಶ್ 359, ಮುರಳಿ 333, ಲಕ್ಷ್ಮೀ ಸಂಪತ್ 323, ಉದಯ್ ಕುಮಾರ್ 319, ಪುರುಷೋತ್ತಮ 315, ಪ್ರವೀಣ್ ಕುಮಾರ್ 303, ತಿಮ್ಮರಾಜು 301 ಮತ ಪಡೆದು ಆಡಳಿತ ಮಂಡಳಿತ ಸದಸ್ಯರಾಗಿ ಚುನಾಯಿತರಾಗಿದ್ದಾರೆ.

ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆಲ್ಲುತ್ತಿದ್ದಂತೆ ಅವರ ಅಭಿಮಾನಿಗಳು ಹಾರ ಹಾಕುವ ಮೂಲಕ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಗೆದ್ದ ಅಭ್ಯರ್ಥಿಗಳು ತಮಟೆಯ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.