ಆನೇಕಲ್: ಸ್ನೇಹಿತರೊಂದಿಗೆ ಮೋಜು ಕೂಟ ಮಾಡಲು ಹೋಗಿದ್ದ ಯುವಕನೊಬ್ಬ ಶವವಾಗಿ ಪತ್ತೆಯಾಗಿರುವ ಘಟನೆ ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿ ವಾಬಸಂದ್ರದಲ್ಲಿ ನಡೆದಿದೆ.
ಮೃತ ವ್ಯಕ್ತಿ ಸುದೀಪ್. ತಾಲ್ಲೂಕಿನ ಸಿಂಗಸಂದ್ರ ಶಾಂತಿಪುರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ದಸರಾ ಪೂಜೆಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ತಿಳಿಸಿ ಹೋದವರು ವಾಪಸ್ ಬಂದಿರಲಿಲ್ಲ.
ಮೂರು ದಿನವಾದರೂ ಮನೆಗೆ ಬಾರದಿದ್ದಾಗ ಸುದೀಪ್ ತಾಯಿಯು ಸ್ನೇಹಿತರನ್ನು ವಿಚಾರಿಸಿದಾಗ ನೀಲಗಿರಿ ತೋಪಿನಲ್ಲಿ ಮೋಜು ಕೂಟ ಮಾಡಿದ್ದಾಗಿ ತಿಳಿಸಿದ್ದು ಆ ಸ್ಥಳದಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಇವರ ಜತೆಯಲ್ಲಿ ತೆರಳಿದ್ದ ಸತೀಶ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.