ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರದ್ಧಾಭಕ್ತಿಯ ಆಡಿಪುರಂ ಗಂಜಿಪೂಜೆ

Published 22 ಜುಲೈ 2023, 15:30 IST
Last Updated 22 ಜುಲೈ 2023, 15:30 IST
ಅಕ್ಷರ ಗಾತ್ರ

ಆನೇಕಲ್ : ಪಟ್ಟಣದ ಸಂತೆ ಬೀದಿಯಲ್ಲಿನ ಓಂ ಆದಿಪರಾಶಕ್ತಿ ದೇವಾಲಯದಲ್ಲಿ 17ನೇ ವರ್ಷದ ಆಡಿಪುರಂ ಗಂಜಿಪೂಜೆ ಕಾರ್ಯಕ್ರಮ ಶ್ರದ್ಧಾಭಕ್ತಿಗಳಿಂದ ನೆರವೇರಿತು. ಭಕ್ತರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಗಂಜಿ ಪೂಜೆಯ ಅಂಗವಾಗಿ ಮಹಿಳೆಯರು ಬೆಂಕಿ ಮಡಿಕೆಯನ್ನು ಹೊತ್ತು ಪ್ರದಕ್ಷಿಣೆ ಮಾಡಿ ಪೂಜೆ ಸಲ್ಲಿಸಿದರು. ಗಂಜಿ ಪೂಜೆ ನೆರವೇರಿಸಿ ದೇವಿಯ ದರ್ಶನ ಪಡೆದರು.

ನೂರಾರು ಮಹಿಳೆಯರು ಆಡಿಪುರಂ ಗಂಜಿಪೂಜೆಯಲ್ಲಿ ಪಾಲ್ಗೊಂಡು ಬೆಂಕಿ ಮಡಕೆ ಹೊತ್ತು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಮಧ್ಯಾಹ್ನ 3 ರಿಂದ ಸಂಜೆ 7ರವರೆಗೂ ದೇವಿಗೆ ಭಕ್ತರೇ ಕ್ಷೀರಾಭಿಷೇಕ ಮಾಡಿದರು. ಬೆಳಗಿನಿಂದಲೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ದೇವಾಲಯದ ಅರ್ಚಕ ಶಕ್ತಿ ವಿ.ವರದರಾಜು, ಪುರಸಭೆ ಮಾಜಿ ಅಧ್ಯಕ್ಷ ಎನ್.ಎಸ್.ಪದ್ಮನಾಭ, ಸದಸ್ಯ ರಾಜೇಂದ್ರ ಪ್ರಸಾದ್‌ ಇದ್ದರು.

ಆನೇಕಲ್ನ ಸಂತೆ ಬೀದಿಯಲ್ಲಿನ ಓಂ ಆದಿಪರಾಶಕ್ತಿ ಪೀಠದಲ್ಲಿ 17ನೇ ವರ್ಷದ ಆಡಿಪುರಂ ಗಂಜಿಪೂಜೆಯಲ್ಲಿ ಬೆಂಕಿ ಮಡಕೆಯನ್ನು ಹೊತ್ತು ಹರಕೆ ಸಲ್ಲಿಸಿದ ಭಕ್ತರು
ಆನೇಕಲ್ನ ಸಂತೆ ಬೀದಿಯಲ್ಲಿನ ಓಂ ಆದಿಪರಾಶಕ್ತಿ ಪೀಠದಲ್ಲಿ 17ನೇ ವರ್ಷದ ಆಡಿಪುರಂ ಗಂಜಿಪೂಜೆಯಲ್ಲಿ ಬೆಂಕಿ ಮಡಕೆಯನ್ನು ಹೊತ್ತು ಹರಕೆ ಸಲ್ಲಿಸಿದ ಭಕ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT