ಸೋಮವಾರ, ಮಾರ್ಚ್ 8, 2021
22 °C

ದೇವನಹಳ್ಳಿ: ವಾಯುವಿಹಾರಕ್ಕೆ ಹೋಗಿದ್ದ ವ್ಯಕ್ತಿ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ವಾಯುವಿಹಾರಕ್ಕೆಂದು ಹೋಗಿದ್ದ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಇಲ್ಲಿನ ಸಿಲಿಕಾನ್‌ ಲೇಔಟ್‌ನಲ್ಲಿ ನಡೆದಿದೆ.

ಮೃತರನ್ನು ನಾಗರಾಜ್ ಮೂರ್ತಿ (65) ಎಂದು ಗುರುತಿಸಲಾಗಿದೆ. ಅವರು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕೆಂದು ಹೋಗುತ್ತಿದ್ದರು. ಶುಕ್ರವಾರ ಸಂಜೆ 5ಕ್ಕೆ ಮನೆಬಿಟ್ಟು ಹೋದವರು ರಾತ್ರಿ 7.30ವರಗೂ ಬಂದಿರಲಿಲ್ಲ. ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ನಂತರ ಶನಿವಾರ ಬೆಳಿಗ್ಗೆ ಹುಡುಕಾಟ ನಡೆಸಿದಾಗ ಹತ್ಯೆಯಾಗಿರುವುದು ಗೊತ್ತಾಯಿತು ಎಂದು ಕುಟುಂಬದ ಸದಸ್ಯರಾದ ವಿಶ್ವನಾಥ್ ಮತ್ತು ಅನಿಲ್ ಕುಮಾರ್ ಮಾಹಿತಿ ನೀಡಿದರು.

ಅವರ ಬೆರಳು ಮತ್ತು ಕೊರಳಿನಲ್ಲಿ 90 ಗ್ರಾಂ ಚಿನ್ನದ ಉಂಗುರ ಮತ್ತು ಚೈನ್ ಇತ್ತು. ಮಚ್ಚಿನಿಂದ ತಲೆ ಮತ್ತು ಕುತ್ತಿಗೆ ಸೀಳಿ ಆಭರಣ ಮತ್ತು ಮೊಬೈಲ್ ಕಸಿದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.