ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಿನ್ನ ಆಹ್ವಾನ ಪತ್ರಿಕೆ

Last Updated 3 ಜುಲೈ 2018, 16:26 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಮದುವೆಗಳ ಆಮಂತ್ರಣ ಪತ್ರಿಕೆಗಳು ಈಗ ಹಣ, ಅಭಿರುಚಿಗೆ ತಕ್ಕಂತೆ ತರಹೇವಾರಿ ಮಾದರಿಗಳಲ್ಲಿ ಬಂದಿವೆ.ಕಲಾವಿದರಾದರೆ ತಾವೇ ಸ್ವಂತ ಬಿಡಿಸಿದ ಚಿತ್ರಗಳಲ್ಲಿ ಆಹ್ವಾನ ಪತ್ರಿಕೆಗಳನ್ನು ಸಿದ್ದಪಡಿಸುತ್ತಾರೆ. ಇದಲ್ಲದೆ ಡಿಜಿಟಲ್‌ ತಂತ್ರಜ್ಞಾನ ಬಂದ ನಂತರವೂ ಹತ್ತಾರು ಬಣ್ಣ ಬಣ್ಣಗಳ ಮಾದರಿಯ ಆಹ್ವಾನ ಪತ್ರಿಕೆಗಳು ಮಾರುಕಟ್ಟೆಯಲ್ಲಿ ಬಂದಿವೆ.

ಆದರೆ ಈ ಎಲ್ಲ ಸಿದ್ಧ ಮಾದರಿಗಳಿಗೂ ಭಿನ್ನವಾಗಿ ಆಲೋಚಿಸಿರುವ ತಾಲ್ಲೂಕಿನ ಸಾಸಲು ಗ್ರಾಮದ ನಿವಾಸಿ ಆರ್‌. ರಂಗಸ್ವಾಮಿ ಅವರು ಎಟಿಎಂ ಕಾರ್ಡ್‌ ಅಳತೆಯಲ್ಲಿ ವಿವಾಹದ ಆಹ್ವಾನ ಪತ್ರಿಕೆ ಮುದ್ರಿಸಿ ಸ್ನೇಹಿತರಿಗೆ ವಿತರಿಸಿದ್ದಾರೆ. ಕಾರ್ಡ್‌ನಷ್ಟೇ ಗಾತ್ರದ ಪ್ಲಾಸ್ಟಿಕ್‌ ಕಾರ್ಡ್‌ನಲ್ಲಿ ವಿವಾಹದ ಆಹ್ವಾನ ಪತ್ರಿಕೆ ಮುದ್ರಿಸಿದ್ದಾರೆ. ಕಾರ್ಡ್‌ನ ಸಂಖ್ಯೆಗಳು ಮುದ್ರಣಗೊಳ್ಳುವ ಒಂದು ಬದಿಯ ಸ್ಥಳದಲ್ಲಿ ಮದುವೆಯ ದಿನಾಂಕ, ಸಮಯವನ್ನು ಮುದ್ರಿಸಲಾಗಿದೆ. ಕಾರ್ಡ್‌ನ ಹಿಂಬದಿಯಲ್ಲಿ ಹೆಣ್ಣು, ಗಂಡಿನ ಭಾವಚಿತ್ರ, ಮದುವೆ ನಡೆಯುವ ಸ್ಥಳವನ್ನು ಮುದ್ರಿಸಿದ್ದಾರೆ.

ಕಾರ್ಡ್‌ನ ಬಾಳಿಕೆಯ ಅವಧಿ ಜೀವಿತಾವಧಿವರೆಗೆ ಎಂದು ಮುದ್ರಿಸಲಾಗಿದೆ. ಇವರ ವಿವಾಹವು ಜುಲೈ 5 ರಂದು ಸಮೀಪದ ಸಾಸಲು ಗ್ರಾಮದ ಕೋಡಿಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT