ವಿಜಯಪುರ ಟೌನ್ ಹಾಲ್ ಸರ್ಕಲ್‍ನಲ್ಲಿ ವ್ಯಕ್ತಿಯೊಬ್ಬರು ಖರೀದಿಸಿದ ಅವರೆಕಾಯಿಯನ್ನು ಚೀಲಕ್ಕೆ ತುಂಬುತ್ತಿರುವುದು ವ್ಯಾಪಾರಿ.
ಸಂಕ್ರಾಂತಿ ಶಿವರಾತ್ರಿವರೆಗೂ ಕೊಯ್ಲು
ಸಾಮಾನ್ಯವಾಗಿ ಮುಂಗಾರಿನಲ್ಲಿ ರೈತರು ವಿವಿಧ ಬೆಳೆಗಳೊಂದಿಗೆ ಅವರೆ ತೊಗರಿ ಸಾಲುಗಳಲ್ಲಿ ಅಥವಾ ಬದುಗಳಲ್ಲಿ ಹಾಕುತ್ತಾರೆ. ಚಳಿಗಾಲದ ಸೀಸನ್‍ನಲ್ಲಿ ಕೊಯ್ಲಿಗೆ ಬರಲಿದೆ. ಸಂಕ್ರಾಂತಿ ಶಿವರಾತ್ರಿಯವರೆಗೂ ಕೊಯ್ಲು ನಡೆಯುತ್ತದೆ. ಈ ಬಾರಿ ಮಾರುಕಟ್ಟೆಗೆ ಅವರೆ ತೊಗರಿಕಾಯಿ ತಡವಾಗಿ ಬಂದಿದ್ದು ಬೇಡಿಕೆ ಹೆಚ್ಚಾಗಿದ್ದು ಬೆಲೆಯೂ ಉತ್ತಮವಾಗಿದೆ ಎಂದು ಆವರೆಕಾಯಿ ಬೆಳೆದ ರೈತ ಸುರೇಶ್ ಹೇಳುತ್ತಾರೆ.
ವಿವಿಧೆಡೆಯಿಂದ ಆಗಮನ
ವಿಜಯಪುರ ಪಟ್ಟಣದ ಮಾರುಕಟ್ಟೆಗೆ ಹೋಬಳಿಯ ಸ್ಥಳೀಯ ಭಾಗದ ರೈತರು ಮಾರುಕಟ್ಟೆಗೆ ತಂದ ನಾಟಿ ಅವರೆ ತೊಗರಿಕಾಯಿಯನ್ನು ವ್ಯಾಪರಸ್ಥರು ಖರೀದಿ ಮಾಡುತ್ತಿದ್ದಾರೆ. ಶುಕ್ರವಾರ ನಡೆದ ಸಂತೆಗೆ ಬೆಂಗಳೂರು ಚಿಕ್ಕಬಳ್ಳಾಪುರ ದೊಡ್ಡಬಳ್ಳಾಪುರ ಶಿಡ್ಲಘಟ್ಟ ಜಂಗಮಕೊಟೆ ದೇವನಹಳ್ಳಿ ಸೇರಿದಂತೆ ವಿವಿಧೆಡೆಯಿಂದ ವ್ಯಾಪಾರಿಗಳು ತಂದು ಮಾರಾಟ ಮಾಡಿದ್ದಾರೆ.