ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡು ಮರಿಗೆ ಜನ್ಮ ನೀಡಿದ ಆನೆ ರೂಪಾ

Last Updated 3 ಆಗಸ್ಟ್ 2020, 0:14 IST
ಅಕ್ಷರ ಗಾತ್ರ

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ರೂಪಾ ಗಂಡು ಮರಿಗೆ ಜನ್ಮ ನೀಡಿದ್ದು ಇದರಿಂದಾಗಿ ಉದ್ಯಾನದ ಆನೆ ಕುಟುಂಬ ಸದಸ್ಯರ ಸಂಖ್ಯೆ 24ಕ್ಕೆ ಏರಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ಸಿಂಗ್‌ ತಿಳಿಸಿದ್ದಾರೆ.

ರೂಪಾಳಿಗೆ ಜನಿಸಿರುವ ಎರಡನೇ ಮರಿ ಇದಾಗಿದೆ. ಈ ಹಿಂದೆ 2016ರಲ್ಲಿ ಗೌರಿ ಎಂಬ ಹೆಣ್ಣು ಮರಿಗೆ ರೂಪಾ ಜನ್ಮ
ನೀಡಿದ್ದಳು. ತಾಯಿ, ಮರಿ ಆರೋಗ್ಯವಾಗಿದ್ದು ಸಿಬ್ಬಂದಿ ಜತನದಿಂದ ನೋಡಿಕೊಳ್ಳುತ್ತಿದ್ದಾರೆ. ಗೋಧಿ, ಕಡಲೆಕಾಳು, ಬೆಲ್ಲ, ಉದ್ದಿನಕಾಳು, ಹೆಸರಕಾಳು, ತೆಂಗಿನಕಾಯಿ, ಅವಲಕ್ಕಿ, ಈರುಳ್ಳಿ ಸೇರಿದಂತೆ ವಿಶೇಷ ಆಹಾರ ನೀಡುವ ಮೂಲಕ ಮಾವುತರಾದ ಕೆ.ರಾಜಣ್ಣ, ಆರ್‌.ಮಣಿಕಂಠ ಆರೈಕೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT