ಪ್ರಜಾವಾಣಿ ವಾರ್ತೆ

ಆನೇಕಲ್: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯಿಂದ 45ಕಿ.ಮೀ ವರೆಗೆ ಬಿಎಂಟಿಸಿ ಸಂಚಾರವನ್ನು ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ದೇವನಹಳ್ಳಿ ಹೊಸಕೋಟೆ, ನೆಲಮಂಗಲ ರಾಮನಗರ ಮಾಗಡಿ ಸೇರಿದಂತೆ ವಿವಿಧಡೆಯ ಜನರಿಗೆ ಅನುಕೂಲವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ತಾಲ್ಲೂಕಿನ ಅತ್ತಿಬೆಲೆಯಲ್ಲಿ ಬಸ್ ನಿಲ್ದಾಣವನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಗುರುವಾರ ಉದ್ಘಾಟಿಸಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗುತ್ತಿದೆ. ಶಕ್ತಿ ಯೋಜನೆ ಅಡಿಯಲ್ಲಿ 635 ಕೋಟಿ ಮಹಿಳೆಯರು ಬಸ್ ಸಂಚಾರ ನಡೆಸಿರುವುದು ವಿಶ್ವ ದಾಖಲೆಯಾಗಿದೆ ಎಂದರು.

ಆನೇಕಲ್ ತಾಲ್ಲೂಕಿನಲ್ಲಿ ಸುಸಜ್ಜಿತ ಬಸ್ ನಿಲ್ದಾಣಗಳನ್ನು ಸ್ಥಾಪಿಸಬೇಕು ಎಂಬುದು ನಮ್ಮ ಗುರಿಯಾಗಿದೆ. ಜಾಗದ ಕೊರತೆಯಿಂದ ಅತ್ತಿಬೆಲೆ ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ತಡವಾಯಿತು. ಮುಂದಿನ ದಿನಗಳಲ್ಲಿ ಸರ್ಜಾಪುರ ಮತ್ತು ಬನ್ನೇರುಘಟ್ಟಗಳಲ್ಲಿ ಸುಸಜ್ಜಿತ ಬಸ್ ನಿಲ್ದಾಣಗಳನ್ನು ಕಲ್ಪಿಸಲು ಅನುದಾನ ಮೀಸಲಿಡಲಾಗುವುದು ಎಂದರು.

ಅತ್ತಿಬೆಲೆಯಿಂದ ಪ್ರತಿ ನಿಮಿಷಕ್ಕೂ ಒಂದೊಂದು ಬಸ್ ಸಂಚಾರವಿರುತ್ತದೆ. 2,600 ಟ್ರಿಪ್ ಬಸ್ ಸಂಚಾರವಿರುತ್ತದೆ. ಹಾಗಾಗಿ ಬಸ್ ನಿಲ್ದಾಣ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಬಸ್ ನಿಲ್ದಾಣದ ಕೊರತೆಯಿಂದ ಬಸ್ಗಳನ್ನು ರಸ್ತೆ ಬದಿಗಳಲ್ಲಿಯೇ ನಿಲ್ಲಿಸಬೇಕಾಗಿತ್ತು. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗುತ್ತಿತ್ತು. ಈಗ ಸಮಸ್ಯೆ ಬಹೆಹರಿಯಲಿದೆ ಎಂದು ಹೇಳಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಮೆಟ್ರೊ ರೈಲು ಸೇವೆಯಲ್ಲಿ ಎಂಟು ಲಕ್ಷ ಜನ ಓಡಾಡಿದರೆ, ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಸೇರಿದಂತೆ ಸಾರಿಗೆ ಇಲಾಖೆಯ ಬಸ್ಗಳಲ್ಲಿ 45 ಲಕ್ಷಕ್ಕೂ ಅಧಿಕ ಮಂದಿ ಓಡಾಡುತ್ತಾರೆ. ಆದರೆ ಸರ್ಕಾರಗಳು ಮೆಟ್ರೊಗೆ ನೀಡಿದಷ್ಟು ಆದ್ಯತೆ ಸಾರಿಗೆ ವ್ಯವಸ್ಥೆಗಳಿಗೆ ನೀಡದಿರುವುದು ದುಃಖದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಅತ್ತಿಬೆಲೆ ನಿಲ್ದಾಣವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಅಂಗಡಿಗಳನ್ನು ಸ್ಥಾಪಿಸಿ ಪುರಸಭೆಗೆ ಆದಾಯ ಬರುವಂತೆ ಮಾಡಲಾಗುವುದು ಎಂದು ತಿಳಿಸಿದರು.

ಬಿಎಂಟಿಸಿ ಅಧ್ಯಕ್ಷ ವಿ.ಎಸ್.ಆರಾಧ್ಯ, ಬಮೂಲ್ ನಿರ್ದೇಶಕ ಆರ್ ಕೆ ರಮೇಶ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್, ಬಿಎಂಟಿಸಿಯ ಅಬ್ದುಲ್ ಅಹದ್, ಶಿಲ್ಪ, ಪುರಸಭಾ ಮುಖ್ಯಾಧಿಕಾರಿ ದೊಡ್ಡಮಲವಯ್ಯ, ವ್ಯವಸ್ಥಾಪಕ ನಂಜುಂಡಸ್ವಾಮಿ, ಮುಖಂಡರಾದ ಎಸ್.ಎಲ್.ವಿ.ಮುರಳಿ, ಮಂಜುನಾಥ್ ದೇವ, ಪಟಾಪಟ್ ಶ್ರೀನಿವಾಸ್, ಪಟಾಪಟ್ ರವಿ, ವೇಣು ಗೋವಿಂದರಾಜು, ಚಂದ್ರಪ್ಪ, ರವಿ, ನಾಗರಾಜು, ನಾರಾಯಣಸ್ವಾಮಿ, ಶಂಕರ್ ರೆಡ್ಡಿ, ಸುರೇಶ್, ನಾರಾಯಣಸ್ವಾಮಿ, ಅಲ್ಲಾಬಕಾಶ್ ಇದ್ದರು.

Cut-off box - ಬಹುದಿನದ ಬೇಡಿಕೆ ಅತ್ತಿಬೆಲೆ ಬಸ್ ನಿಲ್ದಾಣ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿತ್ತು. ಬಸ್ ನಿಲ್ದಾಣದ ಜಾಗದಲ್ಲಿ ಹಲವು ವರ್ಷಗಳಿಂದ ಸಂತೇ ನಡೆಸುತ್ತಿದ್ದರಿಂದ ಸಂತೆ ವ್ಯಾಪಾರಿಗಳಿಗೆ ಪರ್ಯಾಯ ಜಾಗವನ್ನು ಕಲ್ಪಿಸಿ ಸಾರಿಗೆ ಇಲಾಖೆಯು ಬಸ್ ನಿಲ್ದಾಣವನ್ನು ಸ್ಥಾಪಿಸಿದ್ದು ಉದ್ಘಾಟಿಸಲಾಯಿತು.

Cut-off box - 120 ಗ್ರಾಮಗಳಲ್ಲಿ ಬಸ್ ಶೆಲ್ಟರ್ ಸರ್ಜಾಪುರ ಬಸ್ ನಿಲ್ದಾಣದ ಜಾಗದ ವಿವಾದ ನ್ಯಾಯಾಲಯದಲ್ಲಿದ್ದು ಶೀಘ್ರದಲ್ಲಿ ತೀರ್ಮಾನ ಹೊರ ಬಿಡಲಿದ್ದು ಸುಸಜ್ಜಿತ ಬಸ್ ನಿಲ್ದಾಣವನ್ನು ಸ್ಥಾಪಿಸಲಾಗುವುದು. ತಾಲೂಕಿನ 120 ಗ್ರಾಮಗಳಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಕಲ್ಪಿಸಲು ಕ್ರಿಯಾಯೋಜನೆ ರೂಪಿಸಲಾಗಿದ್ದು ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಬಿ ಶಿವಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.