ಹೊಸಕೋಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರಸಭೆಯ ಹೊಗುತ್ತಿಗೆ ನೌಕರರು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ನೇತೃತ್ವದಲ್ಲಿ ನಗರಸಭೆ ಆವರಣದಲ್ಲಿ ಶುಕ್ರವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ನಗರಸಭೆಯಲ್ಲಿ ಸುಮಾರು 20-30 ವರ್ಷಗಳಿಂದ ಸ್ವಚ್ಛತೆ, ಒಳಚರಂಡಿ ಸೇರಿದಂತೆ ನಾನಾ ಕೆಲಸವನ್ನು ಮಾಡುತ್ತಿರುವ ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು, ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರು, ನೀರು ಸರಬರಾಜು ಸಹಾಯಕರು, ಲೋಡರ್ಸ್, ಕ್ಲೀನರ್ಸ್, ವಾಹನ ಚಾಲಕರು, ಸಹಾಯಕರು, ಡೆಟಾ ಎಂಟ್ರಿ ಆಪರೇಟರ್ಗಳನ್ನು ಕಾಯಂಗೊಳಿಸಬೇಕು ಹಾಗೂ ಎನ್ಪಿಎಸ್ ರದ್ದುಗೊಳಿಸುವಂತೆ ಧರಣಿನಿರತರು ಆಗ್ರಹಿಸಿದರು.

ನಮ್ಮ ಬೇಡಿಕೆ ಈಡೇರಿಕೆ ಈಡೇರಿಸುವಂತೆ ಸರ್ಕಾರವನ್ನು ಹಲವು ವರ್ಷಗಳಿಂದ ಒತ್ತಾಯಿಸಿದ್ದರು. ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾಗರಿಕರಿಗೆ ಮೂಲ ಸೌಕರ್ಯ ಒದಗಿಸುವುದು ನಮ್ಮ ಕೆಲಸ. ಯಾವುದೇ ಸಮಸ್ಯೆ ಇರಲಿ, ಸಂದರ್ಭವಿರಲಿ ತಪ್ಪದೆ ನಮ್ಮ ಕಾಯಕವನ್ನು ನಿರ್ವಹಿಸಲೇಬೇಕು. ಇಷ್ಟೆಲ್ಲಾ ಕಷ್ಟಪಟ್ಟರು ನಮಗೊಂದು ಭದ್ರತೆ ನೀಡಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಅದಷ್ಟು ಬೇಗ ಸರ್ಕಾರ ನಮ್ಮ ಕಷ್ಟ ಅರ್ಥಮಾಡಿಕೊಂಡು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಮುಖಂಡರಾದ ಬಾಸ್ಕರ್, ಮಂಜುನಾಥ್, ಲೋಕೇಶ್, ಗಂಗಾಧರ್, ಉಮಾದೇವಿ, ಗೀತಮ್ಮ, ಶಿವಕುಮಾರ್, ಮಂಜಮ್ಮ, ನರಸಿಂಹ, ರಾಜರಾಜೇಶ್ವರಿ, ವಿನೋದ್, ಕಾಂತರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.