ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ದೂರು: ಗ್ರಾ.ಪಂ ಸದಸ್ಯ ಬಂಧನ

15 ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯ
Last Updated 18 ಜೂನ್ 2021, 4:43 IST
ಅಕ್ಷರ ಗಾತ್ರ

ಆನೇಕಲ್: ವಿವಾಹಿತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ ದೂರಿನ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಪೊಲೀಸರು ಗುರುವಾರ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರನ್ನು ಬಂಧಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಪರಿಚಿತರಾದ ಬನ್ನೇರುಘಟ್ಟ ಗ್ರಾಮ ಪಂಚಾಯಿತಿ ಸದಸ್ಯ ಅಹ್ಮದ್‌ ಪಾಷಾ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ಬನ್ನೇರುಘಟ್ಟ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಸಂತ್ರಸ್ತ ಮಹಿಳೆಯ ದೂರಿನ ಆಧಾರದ ಮೇಲೆ ಅಹ್ಮದ್‌ ಪಾಷಾ ಮತ್ತು ಆತನಿಗೆ ಸಹಾಯ ಮಾಡಿದ ವಾಹನ ಚಾಲಕ ವಹೀದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಂಡಿದ್ದಾರೆ.

‘15 ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ಪಾಷಾಹಲವಾರು ಬಾರಿ ತನ್ನೊಂದಿಗೆ ಚಾಟ್‌ ಮಾಡಿ, ಸ್ನೇಹದ ನಾಟಕವಾಡಿದ್ದ.ಮಾಡೆಲಿಂಗ್‌ ಕ್ಷೇತ್ರದಲ್ಲಿ ಒಳ್ಳೆಯ ಭವಿಷ್ಯವಿದೆ. ಹೆಚ್ಚಿನ ಅವಕಾಶ ಕಲ್ಪಿಸಿಕೊಡುವುದಾಗಿ ತಿಳಿಸಿ, ಭೇಟಿ ಮಾಡುವಂತೆ ತಿಳಿಸಿದ್ದ’ ಎಂದು ಮಹಿಳೆ ಹೇಳಿದ್ದಾರೆ.

‘ಫಾರ್ಮ್‌ಹೌಸ್‌ಗೆ ನನ್ನನ್ನು ಕರೆಯಿಸಿಕೊಂಡು ಅತ್ಯಾಚಾರವೆಸಗಿದ್ದಾನೆ. ನಗ್ನ ಚಿತ್ರಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ’ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾಳೆ.

‘ಜೂನ್‌ 14ರಂದು ಪಾಷಾ ಬುಕ್‌ ಮಾಡಿದ್ದ ವೋಲಾ ಕ್ಯಾಬ್‌ನಲ್ಲಿ ಬಿಟಿಎಂ ಬಡಾವಣೆಯ ಬಿಲಾಲ್‌ ಮಸೀದಿಗೆ ಬಂದಿದ್ದ ಸಂತ್ರಸ್ತ ಮಹಿಳೆ ಅಲ್ಲಿಂದ ಆರೋಪಿ ಕಳುಹಿಸಿದ್ದಕಾರಿನಲ್ಲಿ ಬನ್ನೇರುಘಟ್ಟ ಸಮೀಪದ ಬಿಲ್ವರದನಹಳ್ಳಿಯ ಫಾರ್ಮ್‌ಹೌಸ್‌ಗೆ ತಮ್ಮ ಮಗಳೊಂದಿಗೆ ಬಂದಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಮಗಳನ್ನು ತಿಂಡಿ ತಿನ್ನುವಂತೆ ಒಳಗೆ ಕಳುಹಿಸಿದ ಪಾಷಾ, ಫಾರ್ಮ್‌ಹೌಸ್‌ ತೋರಿಸುವುದಾಗಿ ನನ್ನನ್ನು ಕರೆದುಕೊಂಡು ಕೋಣೆಯೊಂದಕ್ಕೆ ಕರೆದೊಯ್ದು ಗನ್‌ ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ’ ಎಂದು ಮಹಿಳೆ ದೂರಿನಲ್ಲಿಹೇಳಿದ್ದಾರೆ. ‘ಮೊಬೈಲ್‌ನಲ್ಲಿ ಬೆತ್ತಲೆ ಫೋಟೊ ಸೆರೆ ಹಿಡಿದು, ಯಾರಿಗಾದರೂ ಹೇಳಿದರೆ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹೆದರಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ’ ಎಂದು ಬನ್ನೇರುಘಟ್ಟ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT