ದೇವನಹಳ್ಳಿ: ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಆಡಳಿತ ಮಂಡಳಿ ನಿದೇರ್ಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದೇವನಹಳ್ಳಿ ಮತಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಿತ್ತರಹಳ್ಳಿ ರಮೇಶ್ ಗೆಲುವು ಸಾಧಿಸಿದ್ದಾರೆ.

ಬಿಡಿಸಿಸಿ ಬ್ಯಾಂಕ್ ದೇವನಹಳ್ಳಿ ಮತ ಕ್ಷೇತ್ರವೂ ಸಾಕಷ್ಟು ವರ್ಷಗಳಿಂದ ಜೆಡಿಎಸ್ ತೆಕ್ಕೆಯಲ್ಲಿತ್ತು. ಜೆಡಿಎಸ್ ಭದ್ರಕೋಟೆಯನ್ನು ಭೇದಿಸಿ ಕಾಂಗ್ರೆಸ್ ಮುಖಂಡ ಗೆಲುವು ಸಾಧಿಸಿದ್ದಾರೆ.

ದೇವನಹಳ್ಳಿ ಮತಕ್ಷೇತ್ರದಲ್ಲಿ ಒಟ್ಟು 13 ಮತಗಳ ಪೈಕಿ ಜೆಡಿಎಸ್ ತೆಕ್ಕೆಯಲ್ಲಿ 7 ಮತ ಹಾಗೂ ಕಾಂಗ್ರೆಸ್ ಬೆಂಬಲಿತರ ಪರ 6 ಮತಗಳಿತ್ತು. ಎಲ್ಲರೂ ಜೆಡಿಎಸ್ ಅಭ್ಯರ್ಥಿ ಕೆ.ವಿ.ಮಂಜುನಾಥ್ (ಕೋಡಗುರ್ಕಿ) ಅವರ ಸುಲುಭ ಜಯ ಸಾಧಿಸುತ್ತಾರೆ ಎಂದು ಅಂದಾಜಿಸಿದ್ದರು.

ಆದರೆ ಜೆಡಿಎಸ್ ಬೆಂಬಲಿತ ಒಬ್ಬರು ಅಡ್ಡ ಮತದಾನ ಮಾಡಿದ ಕಾರಣದ ಚುನಾವಣೆಯಲ್ಲಿ 7 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಿತ್ತರಹಳ್ಳಿ ರಮೇಶ್ ಗೆಲುವು ಸಾಧಿಸಿದ್ದು, 6 ಮತಗಳನ್ನು ಪಡೆದುಕೊಂಡ ಕೆ.ವಿ.ಮಂಜುನಾಥ್ (ಕೋಡಗುರ್ಕಿ) ಪರಾಭವ ಗೊಂಡಿದ್ದಾರೆ.

ವಿಜೇತ ಅಭ್ಯರ್ಥಿ ಹಿತ್ತರಹಳ್ಳಿ ರಮೇಶ್ ಗೆಲುವು ಸಾಧಿಸುತ್ತಿದ್ದಂತೆ ಮುಖಂಡರು ಮತ್ತು ಕಾರ್ಯಕರ್ತರು ಅವರನ್ನು ಅಭಿನಂದಿಸಿ ವಿಜಯೋತ್ಸವ ಆಚರಿಸಿದರು. ಸಮನ್ವಯದ ಕೊರತೆಯಿಂದ ಜೆಡಿಎಸ್ ಸಹಕಾರಿ ಕ್ಷೇತ್ರದಲ್ಲಿ ದಿನೇದಿನೆ ತನ್ನ ಹಿಡಿತ ಕಳೆದುಕೊಳ್ಳುತ್ತಿದೆ ಎಂದು ರಾಜಕೀಯ ಮುಖಂಡರು ವಿಶ್ಲೇಷಣೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.