ಭಾನುವಾರ, ಅಕ್ಟೋಬರ್ 24, 2021
20 °C

ಕುಂದು ಕೊರತೆ: ರಸ್ತೆ ಅವ್ಯವಸ್ಥೆ: ಸಂಚಾರಕ್ಕೆ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಕಸಬಾ ಹೋಬಳಿಯ ಮಲ್ಲಾತಹಳ್ಳಿಗೆ ಹೋಗುವ ರಸ್ತೆ ಹದಗೆಟ್ಟು ದಶಕಗಳೇ ಕಳೆದಿದೆ.

ಗ್ರಾಮ ಪಂಚಾಯಿತಿ ಮೊದಲುಗೊಂಡು ಜಿಲ್ಲಾಧಿಕಾರಿವರೆಗೂ ಹಲವಾರು ಬಾರಿ ಮನವಿ ಸಲ್ಲಿಸಿ ರಸ್ತೆ ದುರಸ್ತಿ ಮಾಡಿಕೊಡುವಂತೆ ಕೇಳಿಕೊಳ್ಳಲಾಗಿದೆ. ಆದರೆ, ಗ್ರಾಮಸ್ಥರ ಮನವಿಗೆ ಮಾತ್ರ ಸ್ಪಂದನೆ ಸಿಕ್ಕಿಲ್ಲ.

ದೊಡ್ಡಬಳ್ಳಾಪುರ- ಗೌರಿಬಿದನೂರು ಹೆದ್ದಾರಿ ಕಂಟನಕುಂಟೆ ಬಳಿಯಿಂದ ಮಲ್ಲಾತಹಳ್ಳಿಗೆ ಸುಮಾರು ಒಂದೂವರೆ ಕಿ.ಮೀ. ದೂರವಾಗುತ್ತದೆ. ಕಾಲ್ನಡಿಗೆಯಲ್ಲಿಯೇ ಗ್ರಾಮಕ್ಕೆ ಹೋಗಬೇಕು. 10 ವರ್ಷಗಳ ಹಿಂದೆ ಹಾಕಲಾಗಿದ್ದ ಜೆಲ್ಲಿ ಕಲ್ಲುಗಳು ಕಿತ್ತುಹೋಗಿ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಮಳೆ ಬಂದಾಗ ಹಗಲಿನ ವೇಳೆಯಲ್ಲಿಯೇ ನಡೆದುಕೊಂಡು ಹೋಗಲು ಸಂಕಷ್ಟಪಡಬೇಕಿದೆ.

ಇನ್ನು ರಾತ್ರಿ ವೇಳೆಯಲ್ಲಿ ನಡೆದುಕೊಂಡು ಹೋಗುವವರು ಕೆಸರಿನಲ್ಲಿಯೇ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ದ್ವಿಚಕ್ರವಾಹನಗಳು ಇರಲಿ ಕನಿಷ್ಠ ನಡೆದುಕೊಂಡು ಹೋಗುವಂತಹ ರಸ್ತೆಯನ್ನಾದರೂ ನಿರ್ಮಿಸಿಕೊಡಲು ಮನವಿ.
-ಚಂದ್ರಶೇಖರ್‌, ಮಲ್ಲಾತಹಳ್ಳಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.