ಶನಿವಾರ, ಮಾರ್ಚ್ 28, 2020
19 °C

ವಿಭಿನ್ನ ಹವಾಗುಣದಲ್ಲಿ ಈರುಳ್ಳಿ ಬೆಳೆದ ರೈತ

ಸಿ.ಜಿ. ಮೋಹನ್‌ಕುಮಾರ್ Updated:

ಅಕ್ಷರ ಗಾತ್ರ : | |

ದಾಬಸ್ ಪೇಟೆ: ಇಲ್ಲಿನ ಮಣ್ಣು ಮತ್ತು ಹವಾಗುಣಕ್ಕೆ ಹೊಂದಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಬೆಂಗಳೂರು
ವ್ಯಾಪ್ತಿಯ ಬಹುತೇಕ ರೈತರು ಈರುಳ್ಳಿ ಬೆಳೆಯಲು ಮುಂದಾಗುವುದಿಲ್ಲ. ಆದರೆ, ನೆಲಮಂಗಲ ಬಳಿಯ ಚನ್ನೋಹಳ್ಳಿಯ ರೈತ ಹನುಮಂತರಾಯಪ್ಪ ಈರುಳ್ಳಿ ಬೆಳೆದು ಯಶಸ್ವಿಯಾಗಿದ್ದಾರೆ. 

‘ನಾವು ಮೊದಲು ಈ ಭಾಗದ ಎಲ್ಲ ರೈತರಂತೆ ಸೊಪ್ಪು, ತರಕಾರಿ ಬೆಳೆಯುತ್ತಿದ್ದೆವು. ಬಳ್ಳಾರಿ ಜಿಲ್ಲೆಯ ಇಟಗಿ ಗ್ರಾಮದ ಕೆಲವು ಈರುಳ್ಳಿ ಬೆಳೆಗಾರರು ನಮಗೆ ಪ್ರೋತ್ಸಾಹ ನೀಡಿದರು. ಇಟಗಿಯಿಂದಲೇ ‘ರೆಡ್ ಡೈಮಂಡ್’ ಬೀಜ ತಂದು, ಅಲ್ಲಿನವರನ್ನೇ ಕರೆಸಿ ಬಿತ್ತನೆ ಮಾಡಲಾಯಿತು’ ಎಂದು ಹನುಮಂತರಾಯಪ್ಪ ಹೇಳಿದರು.

ದೊರೆಯಿತು ಲಾಭ: ‘ಮುಕ್ಕಾಲು ಎಕರೆಯಲ್ಲಿ ನಾಲ್ಕು ತಿಂಗಳ ಹಿಂದೆ ಈರುಳ್ಳಿ ಬಿತ್ತಲಾಯಿತು. 44 ಚೀಲ ಈರುಳ್ಳಿ ಸಿಕ್ಕಿತು. ಅದೇ ಸಂದರ್ಭದಲ್ಲಿ, ನೆರೆ ಹಾವಳಿಯಿಂದ ಉತ್ತರ ಕರ್ನಾಟಕದಲ್ಲಿನ ಬೆಳೆ ಹಾಳಾಯಿತು. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಾಯಿತು. ಖರ್ಚು ಕಳೆದು ₹1.60 ಲಕ್ಷ ಲಾಭ ದೊರೆಯಿತು’ ಎಂದು ಅವರು ಹೇಳಿದರು. 

‘ಈಗ ಒಂದು ಎಕರೆಯಲ್ಲಿ ಬೆಳೆ ಬಂದಿದೆ. ಬೆಲೆ ಕಡಿಮೆಯಾಗಿದ್ದರೂ, ಲಕ್ಷ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದೇನೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು